ವಿಶ್ರಾಂತ ಕುಲ ಸಚಿವೆ ಲೀಲಾ ಕೇಸರಿ ನಿಧನ
ದಾವಣಗೆರೆ: ಮಕ್ಕಳ ತಜ್ಞೆ ಡಾ. ನಿರ್ಮಲ ಕೇಸರಿ ಅವರ ಸಹೋದರಿ, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲ ಸಚಿವೆ ಲೀಲಾ ಕೇಸರಿ (85) ಬೆಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಲೀಲಾ ಕೇಸರಿ ಮೂವರು ಸಹೋದರಿಯರು, ಇಬ್ಬರು ಸಹೋದರರು ಹಾಗೂ ಅಪಾರ ಬಂಧು- ಬಳಗ ಅಗಲಿದ್ದಾರೆ. ಲೀಲಾ ಕೇಸರಿ ಅವರ ಪಾರ್ಥಿವ ಶರೀರವನ್ನು ನಗರದ ಪಿ.ಜೆ. ಬಡಾವಣೆಯಲ್ಲಿರುವ ನಿವಾಸದಲ್ಲಿ ಫೆ.15ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನದವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುವುದು. ಸಂತಾಪ: ಲೀಲಾ ಕೇಸರಿ ಅವರ ನಿಧನಕ್ಕೆ ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯರು, ನೌಕರರು, ಸಿಬ್ಬಂದಿ, ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.