ಸಂತಸೇವಾಲಾಲ್ ಮಹಾರಾಜರ ಜನ್ಮಸ್ಥಳದಲ್ಲಿ ಜಯಂತ್ಯುತ್ಸವ
ನ್ಯಾಮತಿ: ಕರ್ನಾಟಕ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಮಸ್ತ ಬಣಜಾರ ಸಮಾಜದ ಸಂತ ಸೇವಲಾಲ್ ಅವರ ಜನ್ಮಸ್ಥಳ ದಾವಣಗೆರೆ ಜಿಲ್ಲೆ ನ್ಯಾಮತಿ ಸಮೀಪದ ಸೂರಗೊಂಡನಕೊಪ್ಪ ಗ್ರಾಮವಾಗಿದೆ.
ಈ ಕ್ಷೇತ್ರದ ಅಭಿವೃದ್ಧಿಗೆ ಮೊದಲನೇ ಬಾರಿಗೆ ರು. 1 ಕೋಟಿ ಅನುದಾನ, ಎರಡನೇ ಬಾರಿಗೆ ರು. 1.03 ಕೋಟಿ ಅನುದಾನದ ಒಟ್ಟು ರು. 2.10 ಕೋಟಿ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಯಾಗಿದೆ.
ಫೆ.14 ಮತ್ತು 15ರಂದು ಸೂರಗೊಂಡನಕೊಪ್ಪ ಕ್ಷೇತ್ರದ ಸಂತಸೇವಾಲಾಲ್ ಮಹಾರಾಜರ ಜನ್ಮಸ್ಥಳದಲ್ಲಿ 274ನೇ ಜಯಂತ್ಯುತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ.
ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪ ಮುಖ್ಯರಸ್ತೆ ಡಾಂಬರೀಕರಣ ರು. 37 ಲಕ್ಷ ಬಿ.ಎಸ್. ಯಡಿಯೂರಪ್ಪನವರು ಬಣಜಾರ್ ಸಮುದಾಯಕ್ಕೆ ನೀಡಿದ ವಿಶೇಷ ಕೊಡುಗೆಯಾದ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸೇವಾಲಾಲ್ ಭವನಗಳು, ಮೂಲಭೂತ ಸೌಕರ್ಯ ವೆಚ್ಚ ರು. 50 ಕೋಟಿ, 2013- 14ನೇ ಸಾಲಿನ ಬಜೆಟ್‌ನಲ್ಲಿ ತಾಂಡಾ ಅಭಿವೃದ್ಧಿ ನಿಗಮಕ್ಕೆ ರು. 50 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.
ಹೆಚ್ಚಿದ ಹಿರಿಮೆ: ಭಾರತ್ ಬಂಜಾರ ಸಮುದಾಯದ ಸಂತ ಸೇವಲಾಲ್ ಮಹಾರಾಜರ ಜನ್ಮಸ್ಥಳ ಸೂರಗೊಂಡನಕೊಪ್ಪ ಗ್ರಾಮವಾಗಿದೆ.
ಪ್ರತಿವರ್ಷವೂ ಪೆ.14 ಮತ್ತು 15ರಂದು ನಡೆಸಲಾಗುತ್ತಿರುವ ಸಂತಸೇವಲಾಲ್ ಜಯಂತ್ಯುತ್ಸವ ರಾಜ್ಯ ರಾಜ್ಯಗಳಿಂದ ಹರಿದು ಬರುತ್ತಿರುವ ಮಾಲಾಧಾರಿಗಳಾಗಿ ಪಾದಯಾತ್ರೆ ಹಾಗೂ ವಾಹನಗಳಲ್ಲಿ ಬರುತ್ತಿರುವುದು ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸುತ್ತಿದೆ.
ಮಹಾರಾಷ್ಟ್ರ ರಾಜ್ಯದ ಸೇವಲಾಲ್ ಮರಿಯಮ್ಮ ಮಹಾಸಂಸ್ಥಾನ ಮಠದ ಮಹಾತಪಸ್ವಿಗಳಾದ ಡಾ. ರಾಮರಾವ್ ಮಹಾರಾಜರಿಂದ ಆಶೀರ್ವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಫೆ.15ರಂದು ಬೆಳಿಗ್ಗೆ ವಿಶ್ವಶಾಂತಿಗಾಗಿ ಜೋಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.