ಸಮಾಜ ಒಗ್ಗಟ್ಟಾದರೆ ಅಭಿವೃದ್ಧಿ ಸಾಧ್ಯ
ಹರಿಹರ: ಕುರುಹಿನಶೆಟ್ಟಿ ಸಮಾಜದಲ್ಲಿರುವ ಒಳಪಂಗಡಗಳಿಂದಾಗಿ ಸಮಾಜದ ಸಂಘಟನೆಗೆ ಪೆಟ್ಟು ಬಿದ್ದಿದ್ದು, ಒಳಪಂಗಡಗಳನ್ನು ಮರೆತು ಎಲ್ಲರೂ ಒಂದೇ ಎಂಬ ಭಾವನೆ ಮೂಡಿದಾಗ ಐಕ್ಯತೆ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಗುಳೇದಗುಡ್ಡದ ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ ಹೇಳಿದರು. ನಗರದ ನೀಲಕಂಠೇಶ್ವರ ದೇವರ ಪ್ರತಿಷ್ಠಾಪನೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ಕುರುಹಿನಶೆಟ್ಟಿ ಸಮಾಜ ಪ್ರೌಢಸಂಘದಿಂದ ನಡೆದ ಕುರುಹಿನಶೆಟ್ಟಿ ಸಮಾಜದ ಸಮಗ್ರತೆ ಮತ್ತು ಅಭಿವೃದ್ಧಿ ಎಂಬ ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು.
ಗದಗ-ಬೆಟಗೇರಿಯ ನೀಲಕಂಠ ಪಟ್ಟದಾರ್ಯ ಶ್ರೀ ಮಾತನಾಡಿದರು. ಮಾಜಿ ಶಾಸಕ ಬಿ.ಪಿ. ಹರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುರುಹಿನಶೆಟ್ಟಿ ಸಮಾಜ ಪ್ರೌಡಸಂಘದ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಬಿ. ಈಶ್ವರಪ್ಪ, ಅಶೋಕ ವನ್ನಾಲ, ಬಿ.ಎಲ್. ಶ್ರೀನಿವಾಸ, ಜಗನ್ನಾಥ ಗಜೇಂದ್ರಪ್ಪ ಅಗಡಿ, ಡಿ.ಸಿ. ವೀರೇಂದ್ರ, ಎಚ್. ನರಸಿಂಹಶೆಟ್ಟಿ, ನಿಂಗಪ್ಪ ಚೇಗೂರು, ಮಹಾದೇವಪ್ಪ ಬುದ್ದಿ, ಶಿವಾನಂದಪ್ಪ ಜಾಡರ್, ಮಹಾಬಳೇಶ್ವರ ಜಡೆ, ಕೆ.ಎಸ್. ಹನುಮಂತಪ್ಪ, ವೀರಣ್ಣ ಕರೇಜ್ಜಿ, ಹೇಮಕ್ಕ ಕರೇಜ್ಜಿ ಮೊದಲಾದವರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಎಚ್.ಕೆ. ಕೊಟ್ರಪ್ಪ, ಕರಿಯಪ್ಪ ಇಂಡಿ, ರಾಜಣ್ಣ ಅಗಡಿ, ಯಲ್ಲಪ್ಪ ಇಂಡಿ, ಚಂದ್ರಶೇಖರ್ ಆಮ್ರದ್, ಶ್ರೀನಿವಾಸ ಇಂಡಿ ಇತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.