ಕ.ಪ್ರ.ವಾರ್ತೆ, ಸಾಗರ, ಮಾ.6
ತಾಲೂಕಿನ ಇತಿಹಾಸ ಪ್ರಸಿದ್ಧ ಭೀಮಲಿಂಗೇಶ್ವರ ದೇವರ ಜಾತ್ರೆಯು ಮಾ.9ರಿಂದ 13ರ ವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜಿ. ಚಿದಂಬರರಾವ್ ಬಣ್ಣುಮನೆ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಮಾ.9ರಂದು ಗಣಹೋಮ ಮತ್ತು ಶ್ರೀ ದುರ್ಗಾಹವನ, ಮಾ.10 ಮಹಾಶಿವರಾತ್ರಿ ಪೂಜೆ, ಜಾಗರಣೆ, ಮಾ.11 ರಂದು ರುದ್ರಹವನ ಮಾ.12 ಮತ್ತು 13ರಂದು ರಂಗಪೂಜೆ ಸೇರಿದಂತೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.
ಸಾರಿಗೆ ವ್ಯವಸ್ಥೆ: ಜಾತ್ರೆಗೆ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಹೊರ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಜಾತ್ರೆಯ ಎಲ್ಲ ದಿನವೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಕರೂರು, ಬಾರಂಗಿ, ತುಮರಿ ಭಾಗಕ್ಕೆ ಹೋಗುವ ಶ್ರೀಗಜಾನನ ಸಾರಿಗೆ ಸಂಸ್ಥೆ ಬಸ್ಸುಗಳು, ಸಾಗರದಿಂದ ಭಟ್ಕಳ ಮಾರ್ಗದಲ್ಲಿ ಸಂಚರಿಸುವ ಶ್ರೀ ಗಜಾನನ ಸಾರಿಗೆ ಬಸ್ಸುಗಳು ಕ್ಷೇತ್ರಕ್ಕೆ ಆಗಮಿಸಲಿದೆ. ಭಕ್ತಾದಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸರಳೆ ಹೊಳೆಯ ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೆ ಭಕ್ತಾದಿಗಳಿಗೆ ತಂಗಲು ವಸತಿಗೃಹ , ಭೋಜನ ಶಾಲೆ, ಸಭಾಭವನ ಭಕ್ತಾದಿಗಳು ಹಾಗೂ ಜನಪ್ರತಿನಿಧಿಗಳಿಂದ ನಡೆಯಬೇಕಿದೆ. ದೇವಸ್ಥಾನ ಕಟ್ಟಡದ ಛಾವಣಿ ಶಿಥಿಲಗೊಂಡಿದ್ದು, ಇದು ಸಹ ದುರಸ್ಥಿಗೊಳ್ಳಬೇಕಿದೆ. ಎಲ್ಲ ಕಾರ್ಯಕ್ರಮಗಳು ಭಕ್ತಾದಿಗಳಿಂದಲೇ ನಡೆಯಬೇಕಿರುವುದರಿಂದ ಭಕ್ತಾದಿಗಳು ತನು-ಮನ-ಧನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಗಣಪತಿರಾವ್, ರಮಾನಂದ ಹಾಜರಿದ್ದರು.