ಚನ್ನಗಿರಿ ಪಪಂ: ಶೇ.78.18 ಮತದಾನ
ಚನ್ನಗಿರಿ: ಇಲ್ಲಿನ ಪಂಪಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.78.18ರಷ್ಟು ಮತದಾನವಾಯಿತು. ಪಟ್ಟಣದಲ್ಲಿನ 19ವಾರ್ಡ್ಗಳಲ್ಲಿಯೂ ಬೆಳಗ್ಗೆ 7ಗಂಟೆಯಿಂದ ಆರಂಭಗೊಂಡ ಮತದಾನದಲ್ಲಿ ಎಲ್ಲಿಯೂ ಗಲಾಟೆ, ಗದ್ದಲಗಳಿಲ್ಲದೆ ಶಾಂತ ರೀತಿಯಲ್ಲಿ ಮತದಾನ ನಡೆಯಿತು.
ಪಟ್ಟಣದಲ್ಲಿ 15,618ಜನ ಮತದಾರರಿದ್ದು ಇವರಲ್ಲಿ 12,210ಜನ ತಮ್ಮ ಮತಗಳನ್ನು ಚಲಾಯಿಸಿದರು.
ಮತ ಚಲಾಯಿಸಿದವರಲ್ಲಿ 6,286 ಜನ ಪುರುಷರು ಮತ ಚಲಾಯಿಸಿದರೆ, 5924ಜನ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದರು.
ಅತಿ ಹೆಚ್ಚು ಮತದಾನ: 19ನೇ ವಾರ್ಡಿನ ಕಣದಸಾಲು ಬಡಾವಣೆಯಲ್ಲಿ ಶೇ.70.116ರಷ್ಟು ಕಡಿಮೆ ಪ್ರಮಾಣದ ಮತದಾನವಾದರೆ, 11ನೇ ವಾರ್ಡ್ನ ಸಿಹಿನೀರು ಬಾಯಿ ರಸ್ತೆ ಇಲ್ಲಿ ಶೇ.88.161ರಷ್ಟು ಅತಿ ಹೆಚ್ಚು ಮತದಾನವಾದ ಪ್ರದೇಶವಾಗಿದೆ. ಮತದಾರರ ಪಟ್ಟಿಯಲ್ಲಿನ ಹೆಸರು, ವಾಸ ಮಾಡುತ್ತಿರುವ ಪ್ರದೇಶ ಒಂದಾಗಿದ್ದರೆ, ಮತದಾರರ ಪಟ್ಟಿಯಲ್ಲಿ ಹೆಸರುಗಳಲ್ಲಿದೆ ಇನ್ಯಾವುದೇ ಬೇರೆ ವಾರ್ಡಿನ ಮತದಾರರ ಪಟ್ಟಿಯಲ್ಲಿದ್ದು, ಕೆಲ ಮತದಾರರು ಮತ ಚಲಾವಣೆಗೆ ಅಲೆದಾಡಿದರು. ಹೊಸದಾಗಿ ಮತದಾನದ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವ ಮತದಾರರು ಉತ್ಸಾಹದಿಂದಲೇ ತಮ್ಮ ಮತ ಚಲಾಯಿಸಿದರು.
25ವಾರ್ಡ್ನಲ್ಲಿ ಹೆಚ್ಚು ಮತದಾನ
ಹರಪನಹಳ್ಳಿ: ಇಲ್ಲಿನ ಪುರಸಭೆಯ 27 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.75.62ರಷ್ಟು ಮತದಾನವಾಗಿದೆ. ಅತಿ ಹೆಚ್ಚು ಮತದಾನ ತೆಕ್ಕದ ಗರಡಿಕೇರಿ 25ನೇ ವಾರ್ಡ್ನಲ್ಲಿ ಶೇ.86.25 ಮತದಾನವಾಗಿದ್ದರೆ, ಬಾಪೂಜಿ ಬಡಾವಣೆ 5ನೇ ವಾರ್ಡ್ನಲ್ಲಿ ಅತಿ ಕಡಿಮೆ 59.67ರಷ್ಟು ಮತದಾನವಾಗಿದೆ.
ವಾರ್ಡ್ವಾರು ಮತದಾನ: ವಾರ್ಡ್ 1- 72.7 (ಗುಡೇಕೋಟೆ ಕೇರಿ), 2- ಶೇ. 84.51(ಕುರುಬರಗೇರಿ), 3 - ಶೇ. 81.91(ಅಗಸನಕಟ್ಟೆ), 4 - ಶೇ. 65.28 (ಜೋಯಿಸರಕೇರಿ), 5 - ಶೇ.59.67(ಬಾಪೂಜಿ ಬಡಾವಣೆ), 6 -ಶೇ.80.78 (ಬಾಣಗೇರಿ), 7 - ಶೇ.62.43(ಸುಣಗಾರಗೇರಿ), 8 -ಶೇ.83.80(ಸಂಡೂರುಗೇರಿ), 9 -ಶೇ.80.53(ಉಪ್ಪಾರಗೇರಿ), 10 -ಶೇ.72.71(ಶಿಲಾರಗೇರಿ), 11- ಶೇ.73.75(ಚಿತ್ತಾರಗೇರಿ), 12 - ಶೇ.74.41 (ಪಟಾಣಗೇರಿ), 13 -ಶೇ.78.70 (ಹಿಪ್ಪಿತೋಟ), 14 -ಶೇ.79.99 (ತೆಲುಗರಓಣಿ), 15 -ಶೇ.78.18 (ಸಾಳೇರ ಓಣಿ), 16 -ಶೇ. 66.73(ಗುಡಿಕೇರಿ), 17- ಶೇ.66.01( ಗೌಳೇರಕೇರಿ).
18 - ಶೇ.73.07(ಬ್ರೂಸ್ ಪೇಟೆ), 19 - ಶೇ.69.06 (ಮೇಗಳಪೇಟೆ) ಮತದಾನ ನಡೆದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.