ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ಪಾಲಿಕೆಗೆ ಶಾಂತಿಯುತ ಚುನಾವಣೆ

Parashurama
Updated On : 8 Mar 2013, 10:20 am

ಕ.ಪ್ರ.ವಾರ್ತೆ  ದಾವಣಗೆರೆ  ಮಾ.7
ಸಣ್ಣಪುಟ್ಟ ಮಾತಿನ ಚಕಮಕಿ, ತಳ್ಳಾಟಗಳನ್ನು ಹೊರತುಪಡಿಸಿದರೆ ದಾವಣಗೆರೆ ಮಹಾನಗರ ಪಾಲಿಕೆಯ 41 ವಾರ್ಡ್‌ಗಳಿಗೆ ಗುರುವಾರ ನಡೆದ ಚುನಾವಣೆ ಅತ್ಯಂತ ಶಾಂತಿ, ಸುವ್ಯವಸ್ಥಿತವಾಗಿ ನಡೆಯಿತು.
 ನಗರ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳು ಬೆಳಗ್ಗೆಯೇ ಮತಗಟ್ಟೆಗಳಿಗೆ ತೆರಳಿ, ಪೂಜೆ  ಸಲ್ಲಿಸುವ ಮೂಲಕ ತಮ್ಮ ವಿಜಯಕ್ಕಾಗಿ ಪ್ರಾರ್ಥಿಸಿದರು. ಆರಂಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮತ ಚಲಾಯಿಸಲು ಬಂದಿದ್ದ ಮತದಾರರ ಪ್ರಮಾಣ ಉರಿ ಬಿಸಿಲಿನಿಂದಾಗಿ ಸ್ವಲ್ಪ ಕುಂಠಿತವಾಗಿತ್ತು. ನಂತರ ಸಂಜೆ ಹೊತತಿಗೆ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ದೌಡಾಯಿಸಿ, ತಮ್ಮ ಹಕ್ಕು ಚಲಾಯಿಸಿದರು.
5 ಕಡೆ ಕೈಕೊಟ್ಟ ಮತ ಯಂತ್ರ: ಆರಂಭದಲ್ಲಿ 5 ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟಿದ್ದರಿಂದ ಅಂತಹ ಮತಗಟ್ಟೆಯಲ್ಲಿ ಚುನಾವಣೆ ಪ್ರಕ್ರಿಯೆ ಸ್ವಲ್ವ ತಡವಾಗಿ ಆರಂಭಗೊಂಡಿತು. ಬೆಳಗ್ಗೆ 7ರಿಂದಲೇ ಚುನಾವಣೆ
ಪ್ರಕ್ರಿಯೆ ಆರಂಭಗೊಂಡು, ಸಂಜೆ 5 ಗಂಟೆವರೆಗೆ ನಡೆಯಿತು. ಕೆಲವೆಡೆ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ತಳ್ಳಾಟವೂ ಅಲ್ಲಿ ನಡೆದಿದ್ದವು. ನಕಲಿ ಮತದಾನವು ನಡೆದಿದೆ ಎಂಬುದಾಗಿ ಕೆಲವರು ಆರೋಪಿಸಿದರು. 34, 35 ಹಾಗೂ ಮತ್ತೆ ಕೆಲವು ವಾರ್ಡ್‌ಗಳಲ್ಲಿ ಮತದಾರರು ಚಾಲೆಂಜಿಂಗ್ ಓಟು ಮಾಡಿದರು.
 ಯಾವುದೇ ಅಪಸ್ವರ, ಗೊಂದಲ ಸೃಷ್ಟಿಯಾಗಲು ಅವಕಾಶವಿಲ್ಲದಂತೆ ಸಮರ್ಪಕವಾಗಿ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾ ಸಿಬ್ಬಂದಿ ನಡೆಸಿಕೊಟ್ಟರು. ಸಣ್ಣಪುಟ್ಟ ಗುಂಪು ಸೇರಿದರೆ ತಕ್ಷಣ ಅಲ್ಲಿಗೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗುಂಪು ಚದುರುವಂತೆ ನೋಡಿಕೊಂಡರು.
 ಈ ಮಧ್ಯೆ ಸಬ್ ಇನ್ಸ್‌ಪೆಕ್ಟರ್, ಕೆಲ ಪೇದೆಗಳು ಮಾಧ್ಯಮದವರ ಜೊತೆ ಜನರೆದುರು ಹಗುರವಾಗಿ ಮಾತನಾಡಿದ್ದರಿಂದ ಅಲ್ಲಲ್ಲಿ ಮತ್ತಷ್ಟು ಗೊಂದಲದ ಸ್ಥಿತಿ ಉಂಟಾಗಿತ್ತು. ತಕ್ಷಣ ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೂ ತರಲಾಯಿತು.
ಉತ್ಸಾಹದ ಮತದಾನ: ಹಳೆ ಭಾಗಗಳಾದ ಕುರುಬರಕೇರಿ, ಗಾಂಧಿ ನಗರ, ಕಾಯಿಪೇಟೆ, ಜಾಲಿ ನಗರ, ಹೊಂಡದ ಸರ್ಕಲ್, ಶಿವಾಜಿ ನಗರ, ಚಾಮರಾಜಪೇಟೆ, ಬಸವರಾಜ ಪೇಟೆ, ಮಹಾರಾಜ ಪೇಟೆ, ಗಣೇಶ ಪೇಟೆ, ಸುರೇಶ ನಗರ, ಆಜಾದ್ ನಗರ, ಅಹಮ್ಮದ್ ನಗರ, ಮಂಡಕ್ಕಿ ಭಟ್ಟಿ ಲೇಔಟ್, ಬಾಷಾ ನಗರ, ಎಸ್‌ಜೆಎಂ ನಗರ, ಬೇತೂರು ರಸ್ತೆ, ಬಸಾಪುರ, ಆನೆಕಂಡ, ಭಾರತ ಕಾಲನಿ, ಬಂಬೂ ಬಜಾರ್, ಹಳೆ ಬೇತೂರು ರಸ್ತೆ, ಯಲ್ಲಮ್ಮ ನಗರ, ಬುದ್ಧ ಬಸವ ಭೀಮ ನಗರ, ಆವರಗೆರೆ, ಭಗತ್ ಸಿಂಗ್ ನಗರ, ಕೆಇಬಿ ಕಾಲನಿ, ಪಿ.ಜೆ. ಬಡಾವಣೆ, ಚಿಕ್ಕನಹಳ್ಳಿ, ಲೆನಿನ್ ನಗರ, ಭಾಗದಲ್ಲಿ ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.
  ನಿಟುವಳ್ಳಿ, ಸರಸ್ವತಿ ನಗರ, ಚಿಕ್ಕಮ್ಮಣ್ಣಿ ದೇವರಾಜ ಅರಸ್ ಬಡಾವಣೆ, ಕೆಟಿಜೆ ನಗರ, ಮಂಡಿಪೇಟೆ, ಕೆ.ಬಿ. ಬಡಾವಣೆ, ಎಂಸಿಸಿ ಎ ಮತ್ತು ಬಿ ಬ್ಲಾಕ್, ಎಸ್ಸೆಸ್ ಲೇಔಟ್, ಎಸ್ಸೆನ್ ಲೇಔಟ್, ಸಿದ್ದವೀರಪ್ಪ ಬಡಾವಣೆ, ಯರಗುಂಟೆ, ಶಾಬನೂರು, ಕುಂದುವಾಡ ಇತರೆ ಕಡೆ ಮತದಾನ ಸರಾಗವಾಗಿ ಸಾಗಿತ್ತು.   ಆರಂಭದಲ್ಲಿ ಸಾಕಷ್ಟು ಜನರಿದ್ದರಾದರೂ ಬಿಸಿಲು ನೆತ್ತಿಗೇರುತ್ತಿದ್ದ ಹೊತ್ತಿನಲ್ಲಿ ಮತದಾನ ಮಂದವಾಗಿತ್ತು. ಮತ್ತೆ 3 ಗಂಟೆ ನಂತರ ಚುನಾವಣಾ ಪ್ರಕ್ರಿಯೆಗೆ ಚುರುಕು ಮುಟ್ಟಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments