ಹರಪನಹಳ್ಳಿಯಲ್ಲಿ ಶೇ.75.62 ಮತದಾನ
ಕ.ಪ್ರ.ವಾರ್ತೆ ಹರಪನಹಳ್ಳಿ ಮಾ.7
ಇಲ್ಲಿನ ಪುರಸಭಾ ಚುನಾವಣೆಗೆ ಗುರುವಾರ ಬಿರುಸಿನ ಮತದಾನ ನಡೆಯಿತು. ಮತದಾರರು ಬೆಳಗ್ಗಿನಿಂದಲೇ ಆಸಕ್ತಿಯಿಂದ ಚುನಾವಣೆಯಲ್ಲಿ ಪಾಲ್ಗೊಂಡು ಅಭ್ಯರ್ಥಿಗಳ ಹಣೆಬರಹವನ್ನು ಮತ ಪೆಟ್ಟಿಗೆಯಲ್ಲಿ ಹಾಕಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಶೇ.25ರಷ್ಟು, ಮದ್ಯಾಹ್ನ 12 ಗಂಟೆಗೆ ಶೇ.35, 2 ಗಂಟೆಗೆ ಶೇ.45ರಷ್ಟು, ಸಂಜೆ 4 ಗಂಟೆಗೆ ಶೇ.60ರಷ್ಟು ಅಂತಿಮವಾಗಿ ಶೇ.75.62 ಮತದಾನವಾಗಿದೆ. ಇಲ್ಲಿನ ತಾಲೂಕು ಪಂಚಾಯ್ತಿ ಹಾಗೂ ಉಪ್ಪಾರಗೇರಿ ಹಾಗೂ 8ನೇ ವಾರ್ಡ್ ಶಾಲೆಯ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯೇ ಸಾಲಾಗಿ ಮತ ಚಲಾಯಿಸಲು ನಿಂತಿದ್ದರು. ಇಲ್ಲಿನ ತೆಗ್ಗಿನಮಠದ ಚಂದ್ರಮೌಳೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 18ನೇ ವಾರ್ಡ್ನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 22ರಲ್ಲಿ ಇಬ್ಬರು ಸಹಾಯಕರೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ಎಂ.ಪಿ. ರವೀಂದ್ರ ಮತದಾನ: ಬಳ್ಳಾರಿ ಜಿಲ್ಲಾ(ಗ್ರಾಮೀಣ) ಕಾಂಗ್ರೆಸ್ ಅದ್ಯಕ್ಷ ಎಂ.ಪಿ. ರವೀಂದ್ರ ಅವರು 1ನೇ ವಾರ್ಡ್ ಉಪ್ಪಾರಗೇರಿಯ ಮತಗಟ್ಟೆ 2ರಲ್ಲಿ ಇದೇ ಪ್ರಥಮ ಬಾರಿಗೆ ಪಟ್ಟಣದಲ್ಲಿ ಮತ ಚಲಾಯಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.