ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ರಾಜಕಾರಣ ಶುದ್ಧವಾಗಲಿ: ಸಿರಿಗೆರೆ ಶ್ರೀ

Parashurama
Updated On : 9 Mar 2013, 11:15 am

ಚನ್ನಗಿರಿ: ಮತದಾರರೆ ರಾಜಕಾರಣಿಗಳನ್ನು ಕಳ್ಳರನ್ನಾಗಿ ಮಾಡುತ್ತಿದ್ದಾರೆ ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
 ಶುಕ್ರವಾರ ತಾಲೂಕಿನ ರಾಜಗೊಂಡನಹಳ್ಳಿಯಲ್ಲಿ  ಮಾತಾ ಬನಶಂಕರಿ ದೇವಿಯ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಸರ್ವ ಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿ, ರಾಜಕೀಯ ಪಕ್ಷಗಳಲ್ಲಿ ಶಿಸ್ತುಗಳಿಲ್ಲ. ಚುನಾವಣೆಯಲ್ಲಿ ನಾಗರಿಕರಾಗಿ ಮತ ಚಲಾಯಿಸಿ, ಆಸೆ-ಆಮಿಷಗಳಿಗೆ ಬಲಿಯಾಗದೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕಟಿ ಬದ್ದರಾಗಿರಬೇಕು ಎಂದು ಭಕ್ತ ಸಮೂಹಕ್ಕೆ ಕಿವಿಮಾತು ಹೇಳಿದರು.
 ಚುನಾವಣೆಯ ಮುನ್ನ ಅಭ್ಯರ್ಥಿಯಾದವನು ಯಾವ ಪಕ್ಷಕ್ಕೆ ಸೇರಿದವನು ಎಂದು ಗುರುತಿಸಿಕೊಳ್ಳಬೇಕು, ನಂತರ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದು ಕೊಡಬೇಕು ಈ ಬಗ್ಗೆ ಶ್ರೀ ಮಠದಿಂದ ಚುನಾವಣಾ ಆಯೋಗಕ್ಕೆ ಪತ್ರ ಬರೆದು ತಿಳಿಸಲಾಗುವುದು ಎಂದು ಹೇಳಿದ ಶ್ರೀಗಳು, ನಮ್ಮ ಸಲಹೆ ಸೂಕ್ತವಾಗಿದ್ದರೆ ಆಯೋಗ ಅದನ್ನು ಸೇರಿಸಿಕೊಳ್ಳಲಿ ಎಂದು ಹೇಳಿದರು.
 ಸಾಮಾನ್ಯವಾಗಿ ಒಬ್ಬರಿಗೆ ನಿಮ್ಮ ತಂದೆಯ ಹೆಸರೇನು ಎಂದರೆ ತಕ್ಷಣ ಹೇಳಿತ್ತಾರೆ, ಆದರೆ ಇಂದಿನ ರಾಜಕಾರಣಿಗಳಿಗೆ ನಿಮ್ಮ ಪಕ್ಷ ಯಾವುದು ಎಂದು ಕೇಳಿದರೆ ಹೇಳಲು ತಡವರಿಸುತ್ತಾನೆ, ವೇಶ್ಯೆಯ ಮಗ ಮನೆಗೆ ಬರುವ ವಿಠರರಿಗೆಲ್ಲ ಅಪ್ಪ ಎಂದು ಹೇಳುವಂತಿದೆ ಇಂದಿನ ರಾಜಕೀಯ ಪರಿಸ್ಥಿತಿ ಎಂದು ಕಟುವಾಗಿ ಹೇಳಿದರು.  ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿದರು. ಡಾ.ಎ. ಬಸವಣ್ಣಯ್ಯ, ಎಚ್.ಎಸ್. ಶಿವಕುಮಾರ್, ಟಿ.ವಿ. ರಾಜು, ಬಸವರಾಜಪ್ಪ, ಪಾಂಡೋಮಟ್ಟಿ ಲೋಕಣ್ಣ ಇದ್ದರು. ವಿಶೇಷ ಉಪನ್ಯಾಸವನ್ನು ಪ್ರಾಧ್ಯಾಪಕ ಡಾ. ವಂಸತಕುಮಾರ್ ಮಾಡಿದರು.

8ಕೆಸಿಎನ್ಜಿ1
ಸಮಾರಂಭದ ಉದ್ಘಾಟನೆಯನ್ನು ಸಿರಿಗೆರೆ ಶ್ರೀಗಳು ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments