ಲೀಲಾ ಕೇಸರಿ ಸ್ಮರಣೆ, ಆರೋಗ್ಯ ಶಿಬಿರ
ಕ.ಪ್ರ ವಾರ್ತೆ, ದಾವಣಗೆರೆ, ಮಾ.8
ಹಿರಿಯ ಸಮಾಜ ಸೇವಕಿ ದಿ. ಲೀಲಾ ಕೇಸರಿ ಸ್ಮರಣಾರ್ಥ ದಾವಣಗೆರೆ ಚೇತನ ಹೆಲ್ತ್ ಸೆಂಟರ್ನಲ್ಲಿ ಚರ್ಮ ರೋಗ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಲೀಲಾರ ಸಹೋದರಿ, ಅಮೆರಿಕಾದಲ್ಲಿ ಹಿರಿಯ ಎಂಜಿನಿಯರ್ ಆಗಿರುವ ಮಾಲತಿ ಕೇಸರಿ ಶಿಬಿರ ಉದ್ಘಾಟಿಸಿದರು.
ಚರ್ಮರೋಗ ತಜ್ಞೆ ಡಾ.ಸಿ.ಎನ್. ಪಾರ್ವತಿ ನೇತೃತ್ವದ ತಂಡವು ಸುಮಾರು 200ಕ್ಕೂ ಹೆಚ್ಚು ಜನರನ್ನು ತಪಾಸಣೆ ನಡೆಸಿತು. ಕೇಂದ್ರದ ಮುಖ್ಯಸ್ಥ ಎಂ.ಸಿ. ಪ್ರಕಾಶ, ಎಸ್. ನಾಗರಾಜ, ಬಿ. ಮಂಜುನಾಥ, ಕಾರ್ಯಕರ್ತರಾದ ಅವಿನಾಶ, ಡಿ.ಜಿ. ನಾಗಭೂಷಣ ಮತ್ತಿತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.