ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ವ್ಯಾಪಕ ಬಂದೋಬಸ್ತ್: ಎಸ್ಪಿ

Parashurama
Updated On : 10 Mar 2013, 11:47 am

ಕ.ಪ್ರ.ವಾರ್ತೆ, ದಾವಣಗೆರೆ, ಮಾ.9
ದಾವಣಗೆರೆ ಪಾಲಿಕೆ ಸೇರಿದಂತೆ ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳಿಗೆ 11ರಂದು ನಡೆಯುವ ಮತ ಎಣಿಕೆ ಕಾರ್ಯ, ಬಂದೋಬಸ್ತ್‌ಗಾಗಿ ವ್ಯಾಪಕ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠ ಲಾಭೂರಾಮ್ ತಿಳಿಸಿದರು.
 ನಗರದ ಡಿಆರ್‌ಆರ್ ಪಾಲಿಟೆಕ್ನಿಕ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಪಾಲಿಕೆ ಸೇರಿದಂತೆ ಆರೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದರು.
 ಜಿಲ್ಲೆಯ ಆರೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 5 ಡಿಎಸ್ಪಿ, 10 ಸಿಪಿಐ, 44 ಸಬ್ ಇನ್ಸಪೆಕ್ಟರ್, 76 ಎಎಸ್‌ಐ, 215 ಮುಖ್ಯಪೇದೆಗಳು, 560 ಪೇದೆಗಳು, 50 ಮಹಿಳಾ ಪೇದೆ, 5 ಕೆಎಸ್‌ಆರ್‌ಪಿ ತುಕಡಿ, 16 ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳೂ ಸೇರಿದಂತೆ 560 ಸಿಬ್ಬಂದಿ ನಿಯೋಜಿಸಿದೆ ಎಂದು ಅವರು ಹೇಳಿದರು.
 ದಾವಣಗೆರೆ ಮಹಾ ಪಾಲಿಕೆ ವ್ಯಾಪ್ತಿಯಲ್ಲಿ ಇಬ್ಬರು ಪೊಲೀಸ್ ಉಪಾಧೀಕ್ಷಕರು, ಐವರು ವೃತ್ತ ನಿರೀಕ್ಷಕರು, 24 ಸಬ್ ಇನ್ಸಪೆಕ್ಟರ್, 29 ಎಎಸ್‌ಐಗಳು, 94 ಮುಖ್ಯಪೇದೆಗಳು, 250 ಪೇದೆಗಳು, 16 ಮಹಿಳಾ ಪೇದೆಗಳು, 2 ಕೆಎಸ್ ಆರ್‌ಪಿ ತುಕಡಿ,, 6 ಡಿಆರ್ ತುಕಡಿ, ಸೆಕ್ಟರ್ ಮೊಬೈಲ್ ತಂಡಗಳನ್ನು ಬಂದೋಬಸ್ತ್‌ಗಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದರು.
 ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಮಾತನಾಡಿ, ದಾವಣಗೆರೆ ಪಾಲಿಕೆ ಚುನಾವಣೆಯ ಮತ ಎಣಿಕಾ ಕಾರ್ಯಕ್ಕಾಗಿ 81ಟೇಬಲ್‌ನಲ್ಲಿ 162 ಮತ ಎಣಿಕಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 11ರಂದು ಬೆಳಿಗ್ಗೆ 7ಕ್ಕೆ ಆರಂಭಗೊಳ್ಳುವ ಮತ ಎಣಿಕಾ ಕಾರ್ಯ ಅಂದು ಮಧ್ಯಾಹ್ನದ ಒಳಗಾಗಿ ಸಂಪೂರ್ಣವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments