12 ವಾರ್ಡ್ಗಳಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ
ಕಪ್ರ ವಾರ್ತೆ, ಚನ್ನಗಿರಿ, ಮಾ.11
ಕೆಲವೇ ದಿನಗಳ ಹಿಂದೆ ಪಪಂನಲ್ಲಿ ಅಧಿಕಾರ ನಡೆಸಿದ ಬಿಜೆಪಿ ಪಪಂ ಚುನಾವಣೆಯಲ್ಲಿ 12 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದು ಎಲ್ಲಿಯೂ ಖಾತೆ ತೆರೆಯದೆ ಆ ಪಕ್ಷದ ಅಭ್ಯರ್ಥಿಗಳೆಲ್ಲರು ಕೇವಲ 2 ಅಂಕೆಗಳ ಮತಗಳನ್ನು ಪಡೆದು ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.
ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಬಿಎಸ್ಆರ್ ಬಿಜೆಪಿ ಪಕ್ಷಕ್ಕಿಂತ ಭಿನ್ನತೆ ಇಲ್ಲದೆ ಆ ಪಕ್ಷದಿಂದ ಸ್ಪರ್ಧಿಸಿದ್ದ 8 ಜನರೂ ಠೇವಣಿ ಕಳೆದುಕೊಂಡವರು.
ಕೆಜೆಪಿ ಪಕ್ಷ 3 ವಾರ್ಡ್ಗಳಲ್ಲಿ ತನ್ನ ವಿಜಯ ಪತಾಕೆ ಹಾರಿಸಿದ್ದು ಕೆಲವು ಕಡೆ ಪ್ರಬಲ ಸ್ಪರ್ಧೆಯನ್ನು ಒಡ್ಡಿದರೆ ಇನ್ನು ಕೆಲವು ಕಡೆ ಠೇವಣಿ ಕಳೆದುಕೊಂಡಿದೆ.
1ನೇ ವಾರ್ಡ್ನ ಕಾಂಗ್ರೇಸ್ ಅಭ್ಯರ್ಥಿ ಎಂ. ಯೋಗೀಶ್ ಪಟ್ಟಣದ 19 ವಾರ್ಡ್ಗಳಲ್ಲಿಯೇ 321 ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರೆ, 19ನೇ ವಾರ್ಡ್ನ ಕೆಜೆಪಿ ಅಭ್ಯರ್ಥಿ ಸುನಿತಾ ಗಣೇಶ್ ಪಟ್ಟಣದಲ್ಲಿ ಅತಿ ಹೆಚ್ಚಿನ 465 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಪಟ್ಟಣ ಪಂಚಾಯಿತಿ ಚುನಾವಣೆ ಬಗ್ಗೆ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಹಿಮಾ ಜೆ. ಪಟೇಲ್ ಪ್ರತಿಕ್ರಿಯೆ ನೀಡಿ, ಮತದಾರರು ಬದಲಾವಣೆ ಬಯಸಿದ ಪರಿಣಾಮವಾಗಿ ರಾಜ್ಯದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.
ಮಹಿಮಾ ಪಟೇಲ್ ಮಾತನಾಡಿ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸುಂಟರಗಾಳಿಯಂತೆ ಬೀಸಿಕೊಂಡು ಬಂದಿದೆ. ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಯಭೇರಿ
ಚನ್ನಗಿರಿ: 19 ವಾರ್ಡ್ಗಳಲ್ಲಿ 13ರಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿ ಪ.ಪಂ.ನ ಅಧಿಕಾರದ ಗದ್ದುಗೆ ಹಿಡಿದಿದೆ. ಕೆಜೆಪಿ 3 ವಾರ್ಡ್ಗಳಲ್ಲಿ, 2 ವಾರ್ಡ್ಗಳಲ್ಲಿ ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಪ.ಪಂ.ನಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ 12 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದು, ಎಲ್ಲರೂ ಠೇವಣಿಯನ್ನು ಕಳೆದುಕೊಂಡಿದ್ದಾರೆ.
ಗೆದ್ದ ಅಭ್ಯರ್ಥಿಗಳು
1ನೇ ವಾರ್ಡ್ ಕಾಂಗ್ರೆಸ್ ಎಂ. ಯೋಗೀಶ್, 2ನೇ ವಾರ್ಡ್ ಕಾಂಗ್ರೆಸ್ ಸಿ.ವೈ. ರವಿಕುಮಾರ್, 3ನೇ ವಾರ್ಡ್ ಕಾಂಗ್ರೆಸ್ ಸೇಖಾರಾಭಿ, 4ನೇ ವಾರ್ಡ್ ಜೆಡಿಎಸ್ ಜಬೀಉಲ್ಲಾ, 5ನೇ ವಾರ್ಡ್ ಕಾಂಗ್ರೆಸ್ ಎಂ. ರಾಮಚಂದ್ರ, 6ನೇ ವಾರ್ಡ್ ಬಿಜೆಪಿ ಮಂಜುನಾಥ್, 7ನೇ ವಾರ್ಡ್ ಪಕ್ಷೇತರ ಬಿ.ಆರ್. ಹಾಲೇಶ್, 8ನೇ ವಾರ್ಡ್ ಕಾಂಗ್ರೆಸ್ ಗುಲ್ಜರ್ ಬಾನು, 9ನೇ ವಾರ್ಡ್ ಕಾಂಗ್ರೆಸ್ ಸವಿತ ಜಯದೇವಪ್ಪ, 10ನೇ ವಾರ್ಡ್ ಕಾಂಗ್ರೆಸ್ ಖಮೃನ್ನಿಸಾ, 11ನೇ ವಾರ್ಡ್ ಕಾಂಗ್ರೆಸ್ ಅಸ್ಲಾಂ ಬೇಗ್, 12ನೇ ವಾರ್ಡ್ ಕಾಂಗ್ರೆಸ್ ಶಿವರತ್ನಮ್ಮ, 13ನೇ ವಾರ್ಡ್ ಕಾಂಗ್ರೆಸ್ ಶಾಹಿನ ಬಾನು, 14ನೇ ಕಾಂಗ್ರೆಸ್ ಎಚ್.ಬಿ. ರುದ್ರಯ್ಯ, 15ನೇ ವಾರ್ಡ್ ಜೆಡಿಎಸ್ ಎಚ್. ಕೋಮಲ, 16ನೇ ವಾರ್ಡ್ ಕಾಂಗ್ರೆಸ್, 17ನೇ ವಾರ್ಡ್ ಕಾಂಗ್ರೆಸ್ ಸಿ.ಎನ್. ರಮೇಶ್, 18ನೇ ವಾರ್ಡ್ ಕೆಜೆಪಿ ಆರ್. ಮಾಲತೇಶ್ , 19ನೇ ವಾರ್ಡ್ ಕೆಜೆಪಿ ಬಿ.ಆರ್. ಸುನೀತ ಗಣೇಶ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.