ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಾವಣಗೆರೆ

ನೌಕರ ಬಳಗಕ್ಕೆ ಆಯ್ಕೆ

Parashurama
Updated On : 17 Mar 2013, 10:44 am

ದಾವಣಗೆರೆ: ದಾವಣಗೆರೆ ಸಾದರ ನೌಕರರ ಬಳಗದ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷರಾಗಿ ಎ.ಆರ್. ಉಜ್ಜಿನಪ್ಪ, ಅಧ್ಯಕ್ಷರಾಗಿ ಕೆ. ನಾಗಪ್ಪ, ಕಾರ್ಯದರ್ಶಿಯಾಗಿ ಸಿ.ಜಿ. ಜಗದೀಶ ಕೂಲಂಬಿ ಆಯ್ಕೆಯಾಗಿದ್ದಾರೆ. ಬಳಗದ ಉಪಾಧ್ಯಕ್ಷರಾಗಿ ಕೆ.ಎಸ್. ಮಂಜುನಾಥ, ಖಜಾಂಚಿಯಾಗಿ ಡಿ.ಎನ್. ಮಂಜುನಾಥ, ಸಹ ಕಾರ್ಯದರ್ಶಿಯಾಗಿ ಕೆ.ಜಿ. ವಿಜಯಕುಮಾರ, ಸಂಘಟನಾ ಕಾರ್ಯದರ್ಶಿಯಾಗಿ ಸಿ.ಆರ್. ಮರುಳಪ್ಪ ಆಯ್ಕೆಯಾಗಿದ್ದಾರೆ.
ಕ್ಲಬ್ ಉದ್ಘಾಟನೆ
ಹರಿಹರ ತಾ. ಕೊಂಡಜ್ಜಿ ಸಹಿಪ್ರಾ ಶಾಲೆಯಲ್ಲಿ ಡಾನ್ ಬಾಸ್ಕೋ ಸಂಸ್ಥೆ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಉದ್ಘಾಟಿಸಲಾಯಿತು. ಸಂಸ್ಥೆಯ ಬಾಲ ಕಾರ್ಮಿಕರ ಮಿಷನ್ ಸಂಯೋಜಕ ಮಂಜುನಾಥ, ರಾಜು ಮಕ್ಕಳ ಹಕ್ಕು ಬಗ್ಗೆ ಮಾತನಾಡಿದರು. ಚಂದ್ರಪ್ಪ ನಾಮಫಲಕ ಅನಾವರಣ ಮಾಡಿದರು. ಉಪಾಧ್ಯಕ್ಷೆ ಸರೋಜಮ್ಮ, ಎ.ಟಿ. ವಸಂತಕುಮಾರ, ಪಿ. ಗಣೇ ಶ, ಎಂ. ರಾಜಪ್ಪ, ಎಂ.ಎಸ್. ವೆಂಕಟೇಶನಾಯ್ಕ, ಕೆ. ಜಯಶ್ರೀ, ಆರ್. ರಮಾ, ಸಿ. ಜ್ಯೋತಿ, ಎಚ್. ಅಂಜನಾದೇವಿ, ಕೆ. ಸಾವಕ್ಕ, ಶ್ವೇತಾ, ರೇಖಾ, ಮಮತಾ, ಪುನೀತಾ, ಜಾಹೀರ ಹುಸೇನ, ವಾಣಿ, ಪರಿಮಳ, ಪ್ರವೀಣ ಇತರರು ಇದ್ದರು.
ವಿಶೇಷ ಮಕ್ಕಳ ವಸತಿ ಶಾಲೆ ಸಾಧನೆ
ಮಂಗಳೂರು ನಾಲ್ಯಪವದು ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಬುದ್ಧಿಮಾಂದ್ಯ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಾವಣಗೆರೆ ಅಂಗವಿಕಲರ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯ ಮಕ್ಕಳು ಉತ್ತಮ ಸಾಧನೆ ಮೆರೆದು, 13 ಚಿನ್ನ, 10 ಬೆಳ್ಳಿ, 22 ಕಂಚಿನ ಪದಕ ಪಡೆದಿದ್ದಾರೆ. ವೈಯಕ್ತಿಕವಾಗಿ ಶಿಸ್ತಿನ ತಂಡವಾಗಿ ಪ್ರಥಮ, ಪಥ ಸಂಚಲನದಲ್ಲಿ ದ್ವಿತೀಯ, ಅಥ್ಲೆಟಿಕ್ಸ್‌ನಲ್ಲಿ ಚಂದ್ರಕಲಾ ಪ್ರಥಮ ಪಡೆದಿದ್ದಾರೆ. ಮಕ್ಕಳನ್ನು ಸಂಸ್ಥೆಯ ರಮಣ ಲಾಲ್ ಪಿ. ಸಂಘವಿ, ಪೋಟಲಾಲ್ ಜೈನ್, ಡಾ. ಅಂದನೂರು ರುದ್ರಮುನಿ, ಆರ್. ಪರಮೇಶ್ವರ ರಾವ್, ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.
ದಾವಿವಿಯಲ್ಲಿ ಬ್ಯಾಂಕ್ ಶಾಖೆ
ದಾವಣಗೆರೆ ತಾ. ತೋಳಹಣಸೆಯ ಶಿವಗಂಗೋತ್ರಿಯ ದಾವಿವಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯನ್ನು ವಿವಿ ಕುಲಪತಿ ಪ್ರೊ. ಎಸ್. ಇಂದುಮತಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದರು. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಶುಭಬ್ರತ ರೇ, ದಾವಿವಿ ಕುಲ ಸಚಿವ ಡಾ.ಡಿ.ಎಸ್. ಪ್ರಕಾಶ, ಡಾ. ಬಕ್ಕಪ್ಪ, ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ವಿ.ಪಿ. ರವೀಂದ್ರಕುಮಾರ, ಶಾಖಾ ವ್ಯವಸ್ಥಾಪಕ ಗೋವಿಂದ ನೆಟ್ಟರ್, ದಾವಿವಿ ಬೋಧಕ-  ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments