ಜಿಪಂ ಎಂಜಿನಿಯರ್ ಲೋಕಾಯುಕ್ತ ಬಲೆಗೆ
ಹೊನ್ನಾಳಿ: ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಜಗದೀಶ ನಾಯ್ಕ ಅವರು ಮಂಗಳವಾರ ಗುತ್ತಿಗೆದಾರರೊಬ್ಬರಿಂದ 30 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಬಿದ್ದಿದ್ದಾರೆ.
ಹೊನ್ನಾಳಿಯ ಗುತ್ತಿಗೆದಾರ ಕೆ. ಪ್ರಭು ಎಂಬವರಿಗೆ ಗ್ರಾಮೀಣ ನೀರು ಪೂರೈಕೆ ಕಾಮಗಾರಿ ನಡೆಸಿದ ಸಂಬಂಧ ಸುಮಾರು 5.5 ಲಕ್ಷ ಬಿಲ್ ಪಾವತಿಸಲಿ ನಾಯ್ಕ ಅವರು ಲಂಚ ನೀಡುವಂತೆ ಒತ್ತಾಯಪಡಿಸಿದ್ದರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಎಸ್ಪಿ ಎನ್. ಲಿಂಗಾರೆಡ್ಡಿ, ಡಿವೈಎಸ್ಪಿ, ಸಿ.ಬಿ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ದಾಳಿಯ ನೇತೃತ್ವವನ್ನು ಪೊಲೀಸ್ ಇನ್ಸ್ಪೆಕ್ಟರ್ ಎಂ.ಕೆ. ಗಂಗಲ್, ಸಿಬ್ಬಂದಿ ಪವನ್ ಕುಮಾರ್, ಪಂಪಾಪತಿ, ರಮೇಶ್ ಪಾಲ್ಗೊಂಡಿದ್ದರು ಎಂದು ಲೊಕಾಯುಕ್ತ ಎಸ್ಪಿ ಎನ್. ಲಿಂಗಾರೆಡ್ಡಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.