ಧಾರವಾಡ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮೊದಲು ಛಲ ಬೇಕು. ಜೊತೆಗೆ ಪ್ರಾಮಾಣಿಕ ಮತ್ತು ಶ್ರದ್ಧೆಯಿಂದ ಶ್ರಮ ವಹಿಸಿದಾಗ ಗುರಿ ಮುಟ್ಟಲು ಸಾಧ್ಯ ಎಂದು ಐಎಎಸ್ ಪರೀಕ್ಷೆಯಲ್ಲಿ 104ನೇ ರ್ಯಾಂಕ್ ಪಡೆದು ಪಾಸಾದ ಲಕ್ಷ್ಮಣ ನಿಂಬರಗಿ ಹೇಳಿದರು. ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ನಡೆದ ಫ್ರೆಂಡ್ಸ್ ಕ್ಲಬ್‌ನ 3ನೇ ವಾರ್ಷಿಕೋತ್ಸವ, ಕ್ಲಬ್ ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆ ಮಾಡಲು ಕನ್ನಡ ಮಾಧ್ಯಮ ಅಥವಾ ಸರ್ಕಾರಿ ಶಾಲೆಯಾದರೇನು, ಜೀವನದಲ್ಲಿ ಗುರಿ ಇಟ್ಟು ಶ್ರಮ ಪಟ್ಟರೆ ಖಂಡಿತ ಯಶಸ್ಸು ಸಾಧಿಸುತ್ತೇವೆ ಎಂದರು. ವೆಬ್‌ಸೈಟ್ ಬಿಡುಗಡೆಗೊಳಿಸಿದ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ಮಾನವನ ಬದುಕು ಶಿಲಾಯುಗದಿಂದ ತಂತ್ರಜ್ಞಾನದವರೆಗೆ ಬಂದು ನಿಂತಿದೆ. ಈಗಿನ ಆಧುನಿಕ ತಂತ್ರಜ್ಞಾನ ಜಗತ್ತು ಮಾನವನ ಕಪಿಮುಷ್ಟಿಯಲ್ಲಿದೆ. ಇದರಿಂದ ಏನನ್ನು ಬೇಕಾದರು ಸಾಧಿಸಬಹುದು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಉಪಾಧ್ಯಕ್ಷ ತವನಪ್ಪ ಅಷ್ಟಗಿ, ಶಂಕರ ಹಲಗತ್ತಿ, ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಮಾತನಾಡಿದರು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಯುಪಿಎಸ್ ಶಾಲೆ ಪ್ರಾಚಾರ್ಯ ವೀರಣ್ಣ ಬೋಳಿಶೆಟ್ಟಿ, ಚಿಕ್ಕಮಕ್ಕಳ ತಜ್ಞ ಡಾ. ಸಿ.ಆರ್. ನಾಡಗೌಡ, ಉಪಾಧ್ಯಕ್ಷ ವೀರೇಶ ಗೋಡಿಕಟ್ಟಿ, ಕಾರ್ಯದರ್ಶಿ ಸಲೀಂ ಮಿಶ್ರಿಕೋಟಿ, ಪ್ರವೀಣ ಸಾಲಿ, ಪಾಂಡುರಂಗ ಉಪ್ಪಾರ, ಪ್ರಕಾಶ ಆಲದಕಟ್ಟಿ, ಗಿರೀಶ ಕೊಂಗಿ, ಸಾಗರ ರಾಮದುರ್ಗ, ಶಿವರಾಜ್ ಉಗಲಾಟ, ಶಿವಾನಂದ ಕವಳಿ, ಗಜಾನನ ಮೂಶಣ್ಣವರ, ಮುಸ್ತಾಕ ಮುಜಾವರ, ಬಾಬು ಚನಬಸನಗೌಡರ, ಸತೀಶ ಸರ್ಜಾಪುರ, ಪ್ರಕಾಶ ಬಾಳಿಕಾಯಿ, ಅಜಿತ ಬೋಗಾರ, ವಿರೂಪಾಕ್ಷಗೌಡ ಚನ್ನಬಸನಗೌಡರ, ವಿನೋದ ಕುಸುಗಲ್ಲ, ಪ್ರಶಾಂತ ಕ್ಷೀರಸಾಗರ, ಮನೋಹರ ಗೆಂಗಣ್ಣವರ ಇದ್ದರು. ಮುತ್ತು ಮಡಿವಾಳರ ಸ್ವಾಗತಿಸಿದರು. ಸಿದ್ದು ಐರಣಿ ನಿರೂಪಿಸಿದರು. ಸುನೀಲ ಘಂಟಿಯವರ ವಂದಿಸಿದರು.