ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಬಕಾರಿ ಕಚೇರಿ ಮೇಲೆ ಲೋಕಾ ದಾಳಿ

Srinivasa Murthy VN
Updated On : 2 Aug 2013, 11:22 am

ಗದಗ: ಗದಗ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಬಕಾರಿ ಕಚೇರಿಯಲ್ಲಿ ಬಾರ್ ಹಾಗೂ ವೈನ್ಸ್ಟೋರ್ಗಳ ಪರವಾನಗಿ ನವೀಕರಣ ಕೆಲಸ ನಡೆಯುತ್ತಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಹಣಕಾಸಿನ ವ್ಯವಹಾರ ನಡೆಯುತ್ತಿದೆ ಎನ್ನುವ ಖಚಿತ ದೂರಿನ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಸಂಗನಗೌಡ ಸ್ಥಳದಲ್ಲಿ ಹಾಜರಿದ್ದ ಬಾರ್ ಮಾಲೀಕರನ್ನು ತಪಾಸಣೆ ನಡೆಸಿದರು. ಆಗ ಅವರ ಬಳಿಯಿದ್ದ ಸಾವಿರಾರು ರುಪಾಯಿ ಹಣವನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದು, ಕಚೇರಿಯಲ್ಲಿರುವ ಕಡತಗಳನ್ನು ರಾತ್ರಿವರೆಗೆ ಪರಿಶೀಲಿಸಿದರು.

ನಾಲ್ಕು ಆನೆಗಳು ಮರಳಿ ಕಾಡಿಗೆ
ಕುಶಾಲನಗರ: ಕಾಡಿನಿಂದ ನಾಡಿಗೆ ನುಗ್ಗಿ ತೋಟದಲ್ಲಿ ದಾಂಧಲೆ ನಡೆಸುತ್ತಿದ್ದ ನಾಲ್ಕು ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವಲ್ಲಿ ಕುಶಾಲನಗರ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.  ಕುಶಾಲನಗರ ಸಮೀಪ ಅಂದಗೊವೆ ವ್ಯಾಪ್ತಿಯಲ್ಲಿ ಬಿಡಾರ ಹೂಡಿದ್ದ ನಾಲ್ಕು ಆನೆಗಳನ್ನು ದುಬಾರೆಯ ಸಾಕಾನೆ ಶಿಬಿರದ ಆನೆಗಳ ಸಹಾಯದಿಂದ ಅತ್ತೂರು ಮೀಸಲು ಅರಣ್ಯಕ್ಕೆ ಸಾಗಿಸಲು ಕಾರ್ಯಾಚರಣೆ ನಡೆಸಲಾಯಿತು ಎಂದು ಕುಶಾಲನಗರ ಅರಣ್ಯ ವಲಯ ಅಧಿಕಾರಿ ಎಂ.ಎಂ. ಅಚ್ಚಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement