ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರಿಗೆ ಪರ್ಯಾಯ ವ್ಯವಸ್ಥೆ: ಆಗ್ರಹ

Srinivasa Murthy VN
Updated On : 17 Feb 2013, 2:46 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 16
ಪಟ್ಟಣದ ಜನತೆ ಒಂದು ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡಲು ಪುರಸಭೆ ಮುಂದಾಗಿಲ್ಲ. ಅಧಿಕಾರಿಗಳು ಕೂಡಲೇ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಶನಿವಾರ ಪಟ್ಟಣದ ನಾಗರಿಕರು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕುಡಿಯುವ ನೀರಿಗಾಗಿ ತಿಂಗಳಿಂದ ಸಾರ್ವಜನಿಕರು ಪರಿತಪಿಸುತ್ತ ಸುತ್ತಲಿನ ತೋಟಗಳ ಕೊಳವೆಬಾವಿಗಳ ಬಳಿ ನಿಂತು ಕಾಯುವಂತಾಗಿದೆ. ಇಷ್ಟಾದರೂ ಪುರಸಭೆ ಅಧಿಕಾರಿಗಳು ತುಂಗಭದ್ರಾ ನದಿಯನ್ನೇ ನೆಚ್ಚಿಕೊಂಡಿದ್ದು, ಪರ್ಯಾಯ ನೀರಿನ ಮೂಲಗಳನ್ನು ಹುಡುಕಲು ಮುಂದಾಗದಿರುವುದು ನೋವಿನ ಸಂಗತಿ. ಬೇಸಿಗೆಯ ಹಂಗಾಮು ಇನ್ನೂ ದೂರ ಇರುವಾಗಲೇ ಪಟ್ಟಣದ ಜನತೆ ತೀವ್ರ ನೀರಿನ ಬವಣೆ ಅನುಭವಿಸುತ್ತಿದ್ದು, ಅಧಿಕಾರಿಗಳು ಬದಲಿ ವ್ಯವಸ್ಥೆ ಕಲ್ಪಿಸಬೇಕು. ಸಮೀಪದ ಚೆಪ್ಪರಹಳ್ಳದಲ್ಲಿ ಇರುವ ಬೋರ್ವೆಲ್ಗಳನ್ನು ದುರಸ್ತಿ ಮಾಡಿಸಿ ಕುಡಿವ ನೀರಿಗೆ ಬದಲಿ ವ್ಯವಸ್ಥೆ ಮಾಡಬೇಕು ಎಂದು ಪೂರ್ಣಾಜಿ ಖರಾಟೆ ಆಗ್ರಹಿಸಿದ್ದಾರೆ.
ಬಜಾರ್ ರಸ್ತೆಗೆ ಡಾಂಬರಿಲ್ಲ
ಪಟ್ಟಣದ ಮುಖ್ಯ ಬಜಾರ್ ರಸ್ತೆ ಅಗಲೀಕರಣವಾಗಿ 2 ವರ್ಷ ಕಳೆದಿದ್ದು, ಇನ್ನೂ ಡಾಂಬರೀಕರಣವಾಗಿಲ್ಲ. ಬಜಾರ್ನಲ್ಲಿ ವ್ಯಾಪಾರ ಮಾಡುವ ಜನರು ನಿತ್ಯ ಧೂಳಿನ ಸ್ನಾನ ಮಾಡುತ್ತಾ ಅನೇಕ ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಇಷ್ಟಾದರೂ ಪುರಸಭೆ ಆ ರಸ್ತೆಗೆ ಡಾಂಬರ್ ಮಾಡಿಸುವಲ್ಲಿ ಮೀನಮೇಷ ಮಾಡುತ್ತಿದೆ. ಕೂಡಲೇ ಬಜಾರ್ ರಸ್ತೆ ಡಾಂಬರೀಕರಣ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ, ಕುಡಿವ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಭದ್ರಾ ಜಲಾಶಯದಿಂದ ಮೈಲಾರ ಜಾತ್ರೆಗೆ ನೀರು ಬಿಡುವಂತೆ ಕೋರಿಕೆ ಸಲ್ಲಿಸಲಾಗಿದೆ. ಇನ್ನೊಂದು ವಾರದೊಳಗೆ ಕುಡಿವ ನೀರಿನ ತಾಪತ್ರಯ ಕಡಿಮೆಯಾಗುತ್ತದೆ ಎಂದರು.
ಇಬ್ರಾಹಿಂಸಾಬ ರಿತ್ತಿ, ಆದಂಸಾಬ ಬಂಕಾಪುರ, ನಾಗರಾಜ ಚಿಂಚಲಿ, ಲಕ್ಷ್ಮಣ ಸಾತಪುತೆ, ಮಂಜುನಾಥ ಗಜಾಕೋಶ, ಕಪ್ಪತ್ತೆಪ್ಪ ಖರಾಟೆ, ಶೇಖರಪ್ಪ ಹಂಜಗಿ, ರಾಜು ಖರಾಟೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement