ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಿಎಸ್‌ಐಯಿಂದ ಹಲ್ಲೆ: ಕ್ರಮಕ್ಕೆ ಒತ್ತಾಯ

Srinivasa Murthy VN
Updated On : 9 Mar 2013, 11:42 am

ಕೊಪ್ಪಳ: ಯಲಬುರ್ಗಾ ತಾಲೂಕಿನ ಪಿಎಸ್‌ಐ ಎಚ್. ಗುರುಬಸವರಾಜು ತಮ್ಮ ಮಗ ಮತ್ತು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನೀನು ಕಲ್ಲು ಕ್ವಾರಿ ಮಾಡಿರುವೆ ಎಂದು ಮಾಮೂಲು ಕೇಳುತ್ತಿದ್ದಾರೆ ಎಂದು ವಕೀಲ ಎಸ್.ಎಸ್. ಮಾದಿನೂರು ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ಆಕೋಶ ವ್ಯಕ್ತಪಡಿಸಿದರು. ಕುಕನೂರು ಪಟ್ಟಣದ ಸುತ್ತಲೂ ಅತ್ಯಧಿಕವಾಗಿ ಕಲ್ಲು ಕ್ವಾರಿ ದಂಧೆ ನಡೆಯುತ್ತಿದೆ. ಕಲ್ಲು ಕ್ವಾರಿಯ ಮಾಮೂಲ ಕೇಳಲು ಬಂದಿದ್ದೇವೆ. ಮಾಮೂಲು ಕೊಡು ಎಂದು ಕೇಳುತ್ತಿದ್ದಾರೆ. ಆದರೆ, ನಾನು ಯಾವುದೇ ಕಲ್ಲು ಕ್ವಾರಿಯನ್ನು ನಡೆಸುತ್ತಿಲ್ಲ ಎಂದು ಹೇಳಿದರೆ ನನ್ನ ಮಗ ರಾಜಶೇಖರರೆಡ್ಡಿ ಮೇಲೆ ದರ್ಪ ತೋರಿ ಅವಾಚ್ಯ ಶಬ್ದದಿಂದ ಬೈದಿದ್ದಾರೆ ಎಂದು ಮಾದಿನೂರು ಆರೋಪ ಮಾಡಿದರು.
ತಮ್ಮ ಮಗ ರಾಜಶೇಖರ ಮಾರುಕಟ್ಟೆಗೆ ಹೋದಾಗ ಪಿಎಸ್‌ಐ ಗುರುಬಸವರಾಜು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಾದ ಕಾರಣ ತಮ್ಮ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಕೇಳಿಕೊಂಡರೆ ವೈದ್ಯರೂ ನಿರ್ಲಕ್ಷಿಸಿದ್ದಾರೆ. ಮೊದಲು ಪ್ರಕರಣ ದಾಖಲು ಮಾಡಲು ಸೂಚಿಸಿದರು. ವೈದ್ಯರೂ ಹಿರಿಯ ಅಧಿಕಾರಿಗಳಿಂದ ಬೆದರಿಕೆಗೆ ಒಳಗಾಗಿದ್ದಾರೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಪಿಎಸ್‌ಐ ಅವರ ಮಾಮೂಲು ಎತ್ತುವ ಕಾರ್ಯ ಜೋರಾಗಿ ನಡೆಯುತ್ತಿದೆ. ಅಲ್ಲದೇ, ಕ್ವಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾದಿನೂರು ಅಸಮಾಧಾನ ವ್ಯಕ್ತಪಡಿಸಿದರು.
ಪಿಎಸ್‌ಐ ದರ್ಪದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ತಿಳಿಸಿ ಮನವಿ ಮಾಡಲಾಗಿದೆ. ತಮ್ಮ ಮಗನ ಮೇಲೆ ಹಲ್ಲೆ ಮಾಡಿರುವ ಕುರಿತು ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈಗ ನಮ್ಮ ವಿರುದ್ದವೇ ಪ್ರಕರಣ ದಾಖಲು ಮಾಡಿದ್ದಾರೆ ಎಂದರು. ಪಿಎಸ್‌ಐ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೋರ್ಟಿನಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಪ್ಪ ದಿವಟರ್, ದೇವಪ್ಪ ಸೋಬಾನದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement