ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹೃದ್ರೋಗ: ಮುನ್ನೆಚ್ಚರಿಕೆಯೇ ಮದ್ದು

Srinivasa Murthy VN
Updated On : 11 Mar 2013, 2:51 am

ಕನ್ನಡಪ್ರಭ ವಾರ್ತೆ, ಗದಗ, ಮಾ. 10
ಹೃದಯ ರೋಗ ಮತ್ತು ಮಧುಮೇಹ ರೋಗಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ನಿಯಂತ್ರಣ ತಪ್ಪಿದರೆ ಕಾಡುತ್ತವೆ. ಈ ರೋಗಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಎಸ್‌ಡಿಎಂ ನಾರಾಯಣ ಹೃದಯಾಲಯದ ತಜ್ಞ ಚಿಕಿತ್ಸಕ ಡಾ೤ ಷಣ್ಮುಖ ಹಿರೇಮಠ ಹೇಳಿದರು.
ಗುರುವಾರ ಸ್ಥಳೀಯ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಶಿಬಿರದಲ್ಲಿ ಪಾಲ್ಗೊಂಡ ಅವರು, 40 ವರ್ಷಗಳ ಬಳಿಕ ಆರೋಗ್ಯವಂತರೂ ಪ್ರತಿ ವರ್ಷ ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿಸಿಕೊಂಡು ಅವು ನಿಯಂತ್ರಣದಲ್ಲಿವೆ ಎಂದು ಖಚಿತಪಡಿಸಿಕೊಳ್ಳಬೇಕು. ವ್ಯತ್ಯಾಸವಾಗಿದ್ದರೆ ಅವುಗಳ ನಿಯಂತ್ರಣಕ್ಕಾಗಿ ತಜ್ಞ ವೈದ್ಯರಿಂದ ಸೂಕ್ತ ಔಷಧಿ ಪಡೆಯಬೇಕು ಎಂದರು.
ಉದ್ಘಾಟಿಸಿದ ಜ. ಅಭಿನವ ಶಿವಾನಂದ ಶ್ರೀಗಳು ಆಶೀರ್ವಚನ ನೀಡಿ, ಮಿತವಾದ ಆಹಾರ, ಹಿತವಾದ ವ್ಯಾಯಾಮ, ಒತ್ತಡ ರಹಿತ ಜೀವನ ವ್ಯಕ್ತಿಯನ್ನು ನಿರೋಗಿಯಾಗಿಡುತ್ತದೆ. ಒತ್ತಡದ ಬದುಕಿನಿಂದ ಜನರು ದೂರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ೤ ಜಿ.ಬಿ. ಪಾಟೀಲ, ಅತಿಥಿಗಳಾಗಿ ಆಗಮಿಸಿದ್ದ ದಯಾನಂದ ಶ್ರೀಗಳು, ಡಾ೤ ಯು.ವಿ.ಪುರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ೤ ಚೌಡಪ್ಪ ಶಾಬಾಪುರ, ವಿಕ್ರಂ, ಶರಣು ಆಲೂರ, ಡಾ೤ ಧರಣಾ, ವಿ.ಎಸ್. ಹೊಸಮಠ, ಡಾ೤ ಹೊಂಬಣ್ಣವರ ಉಪಸ್ಥಿತರಿದ್ದರು. 250ಕ್ಕೂ ಅಧಿಕ ಜನ ಶಿಬಿರದಲ್ಲಿ ರಕ್ತ ಪರೀಕ್ಷೆ, ಇಸಿಜಿ ಮತ್ತು ಎಕೋ ಪರೀಕ್ಷೆ ಮಾಡಿಸಿಕೊಂಡು ತಜ್ಞರಿಂದ ಚಿಕಿತ್ಸಾ ಸಲಹೆ ಪಡೆದರು. ಭಾಗ್ಯಶ್ರೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ೤ ಎಂ.ಸಿ. ಪಾಟೀಲ ನಿರೂಪಿಸಿದರು. ಡಾ೤ ಅಶೋಕ ಪಾಟೀಲ ವಂದಿಸಿದರು.

ವೈಜ್ಞಾನಿಕ ಮನೋಭಾವನೆ ಬೆಳೆಸಿ: ಪ್ರೊ. ಅರಸನಾಳ
ಮುಂಡರಗಿ: ಶಾಲೆಯಲ್ಲಿ ವೈಜ್ಞಾನಿಕ ಚಟುವಟಿಕೆ ಮೇಲಿಂದ ಮೇಲೆ ಹಮ್ಮಿಕೊಂಡು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಅವಶ್ಯವಾಗಿದೆ ಎಂದು ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.
ಅವರು ಗುರುವಾರ ಪಟ್ಟಣದ ಸರ್ಕಾರಿ ಕೋಟೆ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸುತ್ತಮುತ್ತಲು ಅನೇಕ ಅವೈಜ್ಞಾನಿಕ ಚಟುವಟಿಕೆ ನಡೆಯುತ್ತಿದ್ದು, ಇದರಿಂದ ಮಕ್ಕಳು, ಯುವಕರು ಮೂಢನಂಬಿಕೆಗೆ ಬಲಿಯಾಗುತ್ತಿದ್ದು, ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸುವ ಕೆಲಸ ನಡೆಯಬೇಕಿದೆ ಎಂದರು.
ಆಹಾರ ಬದ್ಧತೆಯ ಬಗ್ಗೆ ಮತ್ತು ಕುಲಾಂತರಿಕ ತಂತ್ರಜ್ಞಾನ ಕುರಿತು ಜನರಿಗೆ ತಿಳಿವಳಿಕೆ ನೀಡುವುದು ಎಲ್ಲ ಹಂತದಲ್ಲಿ ನಡೆಯಬೇಕು. ವಿಜ್ಞಾನಿ ಸಿ.ವಿ. ರಾಮನ್ ವಿಜ್ಞಾನಕ್ಕಾಗಿ ಪಡೆದ ನೋಬೆಲ್ ಪಾರಿತೋಷಕದ ನೆನಪಿಗಾಗಿ ಆಚರಿಸುತ್ತಿರುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಸಿ.ವಿ. ರಾಮನ್‌ರ ಜೀವನ ಚರಿತ್ರೆ ಮತ್ತು ಅವರು ಕಂಡು ಹಿಡಿದ ಬೆಳಕಿನ ಪರಿಣಾಮ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು ಅವಶ್ಯವಾಗಿದೆ ಎಂದರು.
ಶಾಲಾ ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಎಸ್. ನಂಜನಗೂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಡಾ. ನಿಂಗು ಸೊಲಗಿ, ಬಿ.ಆರ್. ಕಬ್ಬೇರ, ಜಿ.ಎ. ಹುನಕುಂಟಿ, ಪಿ.ಎಂ. ಕಾಂಬಳೆ, ಎಸ್.ಐ. ಶಿರೋಳ, ಆರ್.ಎಂ. ತಳವಾರ ಮುಂತಾದವರು ಪಾಲ್ಗೊಂಡಿದ್ದರು. ವಿಜ್ಞಾನ ಶಿಕ್ಷಕ ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿ, ವಂದಿಸಿದರು.

ಶಿಕ್ಷಣದಿಂದ ಬದುಕು ರೂಪುಗೊಳ್ಳಲಿ
ಕನ್ನಡಪ್ರಭ ವಾತೆ, ರೋಣ, ಮಾ. 10
ಉತ್ತಮ ಆಚಾರ-ವಿಚಾರ, ಧರ್ಮ, ಸಂಸ್ಕೃತಿ, ನೈತಿಕತೆ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಶಿಕ್ಷಣದ ಆವಶ್ಯಕತೆಯಿದೆ. ಆ ದಿಶೆಯಲ್ಲಿ ಎಲ್ಲರೂ ಸಾಕ್ಷರರಾಗಬೇಕು ಎಂದು ಗುಲಗಂಜಿ ಮಠದ ಗುರುಪಾದ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಪ್ರಜಂಟೇಶನ್ ಪೂರ್ವ ಪ್ರಾಥಮಿಕ ಶಾಲೆಯಿಂದ ಜರುಗಿದ ವಾರ್ಷಿಕ ಸ್ನೇಹಸಮ್ಮೇಳನ ಮತ್ತು ಪಾಲಕರ ಸಮಾವೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮುದಾಯಗಳು ಆರೋಗ್ಯ ಪರಿಸರದಲ್ಲಿ ಶಾಂತ ಜೀವನ ಮತ್ತು ಸೌಹಾರ್ದತೆಯ ಬಾಳು ನಡೆಸಲು ಶಿಕ್ಷಣ ಸಹಕಾರಿಯಾಗುತ್ತದೆ. ಮಕ್ಕಳು ಉತ್ತಮ ಚಾರಿತ್ರ್ಯ ಹೊಂದಿ, ಉತ್ತಮ ನಡತೆ ಕಲಿಯಲು ಪಾಲಕ ಮತ್ತು ಶಿಕ್ಷಕರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಬಿಜೆಪಿಯ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಸವಂತಪ್ಪ ತಳವಾರ ಮಾತನಾಡಿ, ಸಮಾಜ ಸುಧಾರಣೆ ಹೊಂದಿ ಆರ್ಥಿಕ ಪ್ರಗತಿ ಸಾಧಿಸಲು ಶಿಕ್ಷಣ ಅವಶ್ಯಕವಾಗಿದೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಜಿಡ್ಡಿಬಾಗಿಲ ವಹಿಸಿದ್ದರು. ಹಲವರನ್ನು ಸನ್ಮಾನಿಸಲಾಯಿತು. ಕೆ.ಎಂ. ದಿವಾಣದ, ಪಿ.ಎಚ್. ಕಡಿವಾಲ, ಎಚ್.ಎಲ್. ದಾಸರ, ರಾಜಣ್ಣ ಹೂಲಿ, ಆರ್.ಎಸ್. ಮುಗಳಿ, ಎಸ್.ಬಿ. ಜಿಡ್ಡಿಬಾಗಿಲ, ಬಸವರಾಜ ಕಟ್ಟಿಮನಿ, ರವಿ ಗಂಜಾಳ, ಇಂದಿರಾ ಕಿರೇಸೂರ ಮುಂತಾದವರು ಉಪಸ್ಥಿತರಿದ್ದರು. ಶರಣು ಪುರಾಣಿಕಮಠ ಸ್ವಾಗತಿಸಿದರು. ಸಾವಿತ್ರಿ ಪಾಟೀಲ ನಿರೂಪಿಸಿ, ವಂದಿಸಿದರು.

ಆತ್ಮವಿಶ್ವಾಸವಿದ್ದರೆ ಮಾತ್ರ ಸಾಧನೆ ಸಾಧ್ಯ: ಪ್ರಕಾಶ
ಗದಗ: ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಅಂದಾಗ ಮಾತ್ರ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹಾವೇರಿ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಬಿ. ಪ್ರಕಾಶ ಹೇಳಿದರು. ಈಚೆಗೆ ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಜೀವನಗತಿ ಮಾರ್ಗದರ್ಶನ 1 ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರ ಪ್ರಯತ್ನ ಮಾಡುತ್ತಿರಬೇಕು. ಎಲ್ಲರೂ ಆತ್ಮವಿಶ್ವಾಸ ರೂಢಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು. ಹರ್ಷವರ್ಧನ ಶೀಲವಂತರ ವೃತ್ತಿ ಬದುಕಿನ ಸವಾಲುಗಳ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ರಾಜೇಶ ಹೊಂಗಲ ವಹಿಸಿದ್ದರು. ಎಂ. ಪ್ರಶಾಂತಗೌಡ, ಸಿ.ಆರ್. ಕಂದಗಲ್, ಜಿ.ಎಸ್. ಪವಾಡದ, ಪ್ರಕಾಶ ಗುಗ್ಗರಿ, ಗೊಡ್ಡಮ್ಮಿಯವರ ಇದ್ದರು. ಪ್ರೊ.ಶಿಲ್ಪಾ ಕುಲಕರ್ಣಿ ಸ್ವಾಗತಿಸಿದರು. ಶಂಭುಲಿಂಗ ಉಪ್ಪಿನ ನಿರೂಪಿಸಿದರು. ಆನಂದ ಗಾಣಿಗೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement