ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭಿವೃದ್ಧಿ ಆಧಾರದಡಿ ಮತಯಾಚನೆ

Srinivasa Murthy VN
Updated On : 4 May 2013, 11:36 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 3
ರೋಣ ತಾಲೂಕಿನಲ್ಲಿ ಪ್ರಗತಿ ಪಥದತ್ತ ಸಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಸಾಧನೆ ಮುಂದಿಟ್ಟುಕೊಂಡು ಜನತೆಯಲ್ಲಿ ಮತ ಕೇಳಲು ಮುಂದಾಗಿದ್ದೇನೆ ಎಂದು ಸಚಿವ ಕಳಕಪ್ಪ ಬಂಡಿ ಹೇಳಿದರು.
ಈಚೆಗೆ ಸ್ಥಳೀಯ ಹಿರೇಬಜಾರದಲ್ಲಿ ನಡೆದ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ರೋಣ ತಾಲೂಕಿನಲ್ಲಿ ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳು ಮತದಾರರಿಗೆ ಮನದಟ್ಟು ಮಾಡಲಾಗಿದೆ. ಬಿಜೆಪಿ ಜನ ಸೇವೆಯಲ್ಲಿ ಸದಾ ನಿರತವಾಗಿದೆ. ಹಿಂದೆ ಆಳ್ವಿಕೆ ನಡೆಸಿದ ಯಾವೊಂದು ಪಕ್ಷಗಳು ಕೈಗೊಳ್ಳದಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಕೈಗೊಂಡಿದೆ. ಐದುವರೆ ದಶಕಗಳ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ನೀಡಲಾಗಿದೆ. ಕ್ಷೇತ್ರದ ಜನತೆಯ ರಕ್ಷಣೆಗಾಗಿ ಕಾನೂನು ಸುವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರ ಗೂಂಡಾಗಿರಿ ಮಾಡುತ್ತಿದೆ ಎಂದು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಆದರೆ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾರು ಗೂಂಡಾಗಿರಿ ಮಾಡುತ್ತಾರೆ ಎಂಬುದು ಪ್ರಜ್ಞಾವಂತ ಮತದಾರರು ನೀವೇ ತಿಳಿದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು. ರೋಣ ಮತಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲು ಮತ್ತೊಂದು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಚ್.ಎಸ್. ಸೋಂಪೂರ, ಎಸ್.ಎಲ್. ಹಿರೇಮನಿ, ಬಿ.ಎಂ. ಸಜ್ಜನರ, ಅಪ್ಪಣ್ಣಾ ಮಹೇಂದ್ರಕರ, ಜನ್ನು ರಂಗ್ರೇಜಿ, ಭಾಸ್ಕರ ರಾಯಬಾಗಿ, ಲಾಲಪ್ಪ ರಾಠೋಡ, ಪ್ರಭು ಚವಡಿ, ಮಂಜುನಾಥ ಬಡಿಗೇರ, ಅಶೋಕ ವನ್ನಾಲ, ಹನುಮಂತಸಾ ಮೇಘರಾಜ, ಕವಿತಾ ಜಾಲಿಹಾಳ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿಗೆ ಅಧಿಕಾರ ಖಚಿತ: ಪಾಟೀಲ
ಕನ್ನಡಪ್ರಭ ವಾರ್ತೆ, ನರಗುಂದ, ಮೇ 3
ರಾಜ್ಯದಲ್ಲಿ ಬಿಜೆಪಿ ತನ್ನ 5 ವರ್ಷದ ಅಧಿಕಾರದ ಅವಧಿಯಲ್ಲಿ ಯಾವ ಪಕ್ಷದ ಸರ್ಕಾರಗಳು ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಮಾಡಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಿಕ್ಕೆ ಬಂದ ನಂತರ ಕೆಲವು ಸಣ್ಣ ಪುಟ್ಟಗಳು ತಪ್ಪುಗಳವಾಗಿವೆ. ಅವುಗಳನ್ನು ತಿದ್ದಿಕೊಂಡು ರಾಜ್ಯದ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರ್ಕಾರ ಶ್ರಮಿಸಿದೆ. ಉತ್ತರ ಕರ್ನಾಟಕ ಭಾಗದವರಾದ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಯಾಗಿದ್ದರಿಂದ ಉತ್ತರ ಕರ್ನಾಟಕ ಅಭಿವೃದ್ಧಿವಾಗಲು ಸಾಧ್ಯವಾಗುತ್ತಿದೆ. ಈ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಜನತೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಸಬೇಕು. ನಾನು ಕೂಡ ಈ ಕ್ಷೇತ್ರಕ್ಕೆ ಸಾವಿರಾರು ಕೋಟಿ ರುಪಾಯಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ದಿನದಲ್ಲಿ ಈ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಮಾತನಾಡಿ, ಸಿ.ಸಿ. ಪಾಟೀಲರು ಸಚಿವ, ಶಾಸಕರಾದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಈ ಬಾರಿಯೂ ಸಿ.ಸಿ. ಪಾಟೀಲರು ಗೆಲ್ಲಲಿದ್ದಾರೆ ಎಂದರು.
ಜಿಪಂ ಸದಸ್ಯ ಎಂ.ಎಸ್. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಸಿ.ವೈ. ದಂಡಿನ, ವಾಸು ಜೋಗಣ್ಣವರ, ಉಮೇಶಗೌಡ ಪಾಟೀಲ, ಪ್ರಕಾಶ ಪಟ್ಟಣಶಟ್ಟಿ, ಉಮೇಶ ಯಳ್ಳೂರ, ಅನಿಲ ಧರಿಯಣ್ಣವರ, ಎಲ್.ಎಂ. ಪಾಟೀಲ, ಉಮೇಶ ಯಳ್ಳೂರ, ಮುತ್ತು ತೆಗ್ಗಿನಮನಿ, ಉಮೇಶ ಮೊರಬದ ಮುಂತಾದವರು ಇದ್ದರು.

ಬಿಜೆಪಿಯಿಂದ ರಾಜ್ಯದ ಲೂಟಿ
ಕನ್ನಡಪ್ರಭ ವಾರ್ತೆ, ನರಗುಂದ, ಮೇ. 3
ರಾಜ್ಯದ ಸಂಪತ್ತು ಲೂಟಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಕಾಂಗ್ರೆಸ್ ನಾಯಕ ಶಂಕರ ಬಿದರಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಗಾಂಧಿ ಚೌಕ್‌ನಲ್ಲಿ ಕಾಂಗ್ರೆಸ್ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು. 5 ವರ್ಷದಲ್ಲಿ 50 ವರ್ಷಗಳಲ್ಲಿ ನಡೆಯದ ಭ್ರಷ್ಟಾಚಾರಗಳನ್ನು ಬಿಜೆಪಿ ಸರ್ಕಾರ ಮಾಡಿದೆ. ಬಿಜೆಪಿ ನಾಯಕರು ಮಾತು ಮಾತಿಗೆ ನಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇವರ ಅವಧಿಯಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ನರಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ಆರ್. ಯಾವಗಲ್‌ರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಸಿಕ್ಕ ನಂತರ ದೇಶದಲ್ಲಿ ಎಲ್ಲ ಸಮುದಾಯದ ಜನತೆಯನ್ನು ಒಗ್ಗಟ್ಟಿನಿಂದ ಕರೆದುಕೊಂಡ ಬಂದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಬಿಜೆಪಿ ಸರ್ಕಾರ ಬಂದ ಮೇಲೆ ಬಡವರನ್ನು, ರೈತರನ್ನು, ಅಲ್ಪಸಂಖ್ಯಾತರರನ್ನು ನಿರ್ಲಕ್ಷಿಸಲಾಗಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಯಾವಗಲ್, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ, ವಿಠಲ ಶಿಂದೆ, ದೇಸಾಯಗೌಡ ಪಾಟೀಲ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಚಂಬಣ್ಣ ವಾಳದ, ಎಂ.ಎಸ್. ತಿಮ್ಮನಗೌಡ್ರ, ದ್ಯಾಮಣ್ಣ ಸವದತ್ತಿ, ರಾಜು ಕಲಾಲ, ಸಿ.ಬಿ. ಪಾಟೀಲ, ಎಸ್.ಆರ್. ಪಾಟೀಲ, ಮಾರುತಿ ಮೇಟಿ, ಎಸ್.ಬಿ. ದಂಡಿನ, ಬಸಪ್ಪ ನರಗುಂದ, ದ್ಯಾಮಣ್ಣ ಕಾಡಪ್ಪನವರ, ಶಿವನಗೌಡ ಹೆಬ್ಬಳ್ಳಿ, ಗಿರಿಯಪ್ಪಗೌಡ ಪಾಟೀಲ, ಎಫ್.ವೈ. ದೊಡಮನಿ, ಪ್ರಕಾಶಗೌಡ ತಿರಕನಗೌಡ್ರ, ಹಿರೇಗೌಡ್ರ, ಉಮೇಶ ವೀರನಗೌಡ್ರ, ಸಿ.ಎನ್. ಮೊರಬದ, ಜಗದೀಶ ರಾಯನಗೌಡ್ರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement