ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇರುವ ಅಧಿಕಾರವನ್ನೇ ನಿರ್ವಹಿಸುವೆ: ನ್ಯಾ. ಭಾಸ್ಕರ್‌ರಾವ್

Srinivasa Murthy VN
Updated On : 16 Sept 2013, 10:46 am

ಗದಗ: ಲೋಕಾಯುಕ್ತಕ್ಕೆ ಸದ್ಯ ಇರುವ ಅಧಿಕಾರವನ್ನೇ ಸಮರ್ಥವಾಗಿ ನಿರ್ವಹಿಸಿ, ಸಾರ್ವಜನಿಕರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವುದೇ ನನ್ನ ಮುಖ್ಯ ಗುರಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್‌ರಾವ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೂವರು ಅಂಗವಿಕಲರು ನೌಕರಿಗಾಗಿ ಅರ್ಜಿ ಸಲ್ಲಿಸಿದ್ದು, ಅವರ ವಿದ್ಯಾರ್ಹತೆ ಹಾಗೂ ಸರ್ಕಾರದ ನಿಯಮಾವಳಿಗಳ ಅಧಿಕಾರದಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿದ್ದೇನೆ. ಇನ್ನು ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಲ್ಲು ಗಣಿಗಾರಿಕೆಯ ಬಗ್ಗೆಯೂ ಮನವಿಗಳು ಬಂದಿದ್ದು, ಕೂಡಲೇ ಅವುಗಳಿಂದ ಸಾರ್ವಜನಿಕರ ಜೀವನದ ಮೇಲಾಗುತ್ತಿರುವ ಪರಿಣಾಮ ಮತ್ತು ಅವುಗಳ ಪರವಾನಗಿಯ ವಿಷಯವನ್ನು ಪರಿಶೀಲಿಸಲು ತಿಳಿಸಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement