ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೋದಿ ಫ್ಲೆಕ್ಸ್ ಹರಿದ ಘಟನೆ ಜಿಲ್ಲಾ ಬಿಜೆಪಿ ಘಟಕ ಖಂಡನೆ

Srinivasa Murthy VN
Updated On : 3 Feb 2014, 11:53 am

ಕನ್ನಡಪ್ರಭ ವಾರ್ತೆ, ಗದಗ, ಫೆ. 2
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾವಚಿತ್ರವಿದ್ದ ಬಿಜೆಪಿ ಪ್ರಚಾರಾರ್ಥದ ನಗರದ ವಿವಿಧೆಡೆ ಫ್ಲೆಕ್ಸ್‌ಗಳನ್ನು ಯಾರೋ ದುಷ್ಕರ್ಮಿಗಳು ರಾಜಕೀಯ ದುರುದ್ದೇಶದಿಂದ ಹರಿದು ಹಾಕಿದ್ದು ಈ ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥ ದುಷ್ಕರ್ಮಿಗಳ ಪತ್ತೆ ಹಾಗೂ ಅವರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಈಚೆಗೆ ಗದಗ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ ಗದಗ ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ಮೋದಿ ಅವರ ಜನಪ್ರಿಯತೆ ಸಹಿಸದೆ ಫೆಕ್ಸ್‌ಗಳನ್ನು ಹರಿದು ಹಾಕಿದ್ದು ಖಂಡನೀಯ. ಪೊಲೀಸರು ಕೂಡಲೇ ಇಂತಹ ಘಟನೆಗಳ ಕುರಿತು ಎಚ್ಚರಿಕೆ ವಹಿಸಬೇಕು. ಫೆಕ್ಸ್ ಯಾರದೆ ಇರಲಿ ಅದನ್ನು ಹರಿದು ಹಾಕುವಂತಹ ದುಷ್ಕೃತ್ಯ ಇನ್ನು ಮುಂದೆ ನಡೆಯದಿರಲಿ ಎಂದರು.
ನಗರದ ಭೂಮರಡ್ಡಿ ವೃತ್ತ, ವಿಶ್ವ ಹೊಟೇಲ್ ಮುಂಭಾಗ ಹಾಗೂ ಬೆಟಗೇರಿಯ ಕೆಲ ಭಾಗದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಲಾಯಿತು. ಬಿಜೆಪಿ ರಾಷ್ಟ್ರೀಯ ಪರಿಷತ್ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತೋಟುಸಾ ಭಾಂಡಗೆ, ಜಿಪಂ ಮಾಜಿ ಅಧ್ಯಕ್ಷೆ ಚಂಬವ್ವ ಪಾಟೀಲ, ಶಹರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಾಂಡಗೆ, ನಾಮದೇವ ಚಿಕ್ಕಣ್ಣವರ, ಶ್ರೀಪತಿ ಉಡುಪಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement