ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯುವಪೀಳಿಗೆಗೆ ಸರ್ದಾರ ಪಟೇಲ್ ಸ್ಫೂರ್ತಿ

Srinivasa Murthy VN
Updated On : 3 Feb 2014, 11:54 am

ರೋಣ: ಸರ್ದಾರ್ ವಲ್ಲಭಭಾಯಿ ಪಟೇಲರ ವ್ಯಕ್ತಿತ್ವ, ಚಿಂತನೆ, ಆದರ್ಶಗಳು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯ ಚಿಲುಮೆಯಾಗಿವೆ ಎಂದು ಲೋಹ ಸಂಗ್ರಹಣ ಸಹಕಾರ ಸಮಿತಿ ಸದಸ್ಯ ವೀರೇಶ ದೊಡ್ಡಣ್ಣವರ ಹೇಳಿದರು.
ಅವರು ಪಟ್ಟಣದ ಸಿದ್ಧಾರೂಢ ಮಠದಲ್ಲಿ ಮಂಗಳವಾರ ರಾತ್ರಿ ದೇಶಾದ್ಯಂತ ಕೈಗೊಳ್ಳಲಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಲೋಹ ಸಂಗ್ರಹಣ ಅಭಿಯಾನ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ದಾರ್ ಪಟೇಲ್‌ರ 600 ಅಡಿ ಎತ್ತರ ಲೋಹದ ಮೂರ್ತಿಯನ್ನು ಗುಜರಾತ್ ರಾಜ್ಯದಲ್ಲಿ ನಿರ್ಮಿಸಲಾಗುತ್ತಿದೆ. ಇದು ಜಗತ್ತಿನ ಅತಿ ಎತ್ತರದ ಮೂರ್ತಿಯಾಗಲಿದೆ. ಮೂರ್ತಿ ನಿರ್ಮಾಣಕ್ಕೆ ದೇಶದ್ಯಾಂತ ಲೋಹ ಸಂಗ್ರಹ ಅಭಿಯಾನ ಪ್ರಾರಂಭವಾಗಿದೆ. ರೈತರ ಬಗೆಗೆ ಅಪಾರ ಕಾಳಜಿಯುಳ್ಳ ಪಟೇಲರ ಮೂರ್ತಿಯನ್ನು ರೈತರು ಬಳಿಸಿದ ಒಕ್ಕಲುತನದ ಲೋಹದ ಪರಿಕರಗಳಿಂದ ನಿರ್ಮಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎನ್. ಬ್ಯಾಳಿ ಮಾತನಾಡಿ, ಅಭಿಯಾನಕ್ಕೆ ಪ್ರತಿಯೊಬ್ಬರ ಸೇವೆ ಅತ್ಯಗತ್ಯವಾಗಿದೆ ಎಂದರು. ಅಭಿಯಾನದಲ್ಲಿ ಪ್ರಗತಿಪರ ಪುರಸಭೆ ಸದಸ್ಯ ವಿಜಯೇಂದ್ರ ಗಡಗಿ ಲೋಹ ದಾನ ಮಾಡಿದರು. ಈ ಸಂದರ್ಭದಲ್ಲಿ 75ಕ್ಕೂ ಹೆಚ್ಚು ರೈತರು ಸಹಿ ಸಂಗ್ರಹಿಸಲಾಯಿತು. ಎಸ್.ಎಸ್. ಜಾಲಿಹಾಳ, ಬಿ.ಎನ್. ಹೂಗಾರ, ಲಕ್ಷ್ಮಣ ಕಮ್ಮಾರ, ಈರಣ್ಣ ಚವಡಿ, ಅಮರಪ್ಪ ಕಿರೇಸೂರ, ರೇವಣಪ್ಪ ಗದಗಿನ ಮುಂತಾದವರು ಉಪಸ್ಥಿತರಿದ್ದರು.
ಶಿವಕುಮಾರ ದೇಶಣ್ಣವರ ಸ್ವಾಗತಿಸಿ, ನಿರೂಪಿಸಿದರು. ಮುತ್ತಣ್ಣ ಕೊಪ್ಪದ ವಂದಿಸಿದರು.

ಸರ್ದಾರ್ ಪಟೇಲ್‌ಗೆರೈತರೆಂದ್ರೆ ಅಚ್ಚುಮೆಚ್ಚು
ರೋಣ: ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರಿಗೆ ರೈತರೆಂದರೆ ಅಚ್ಚುಮೆಚ್ಚು ಆಗಿತ್ತು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ನವಲಗುಂದ ಹೇಳಿದರು.
ಅವರು ಪಟ್ಟಣದ ಕಂಬಿಯವರ ಓಣಿಯ ಬಸವೇಶ್ವರ ದೇವಸ್ಥಾನದಲ್ಲಿ ಈಚೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಲೋಹ ಸಂಗ್ರಹಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ಈ ಅಭಿಯಾನಕ್ಕೆ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ಗುರುರಾಜ ಕುಲಕರ್ಣಿ, ಅರ್ಜುನ ಕೊಪ್ಪಳ, ಶಿವಾನಂದ ಜಿಡ್ಡಿಬಾಗೀಲ, ವೀರೇಶ ದೊಡ್ಡಣ್ಣವರ, ಪುರಸಭೆ ವಿರೋಧ ಪಕ್ಷ ನಾಯಕ ಬಸನಗೌಡ ಪಾಟೀಲ, ಸದಸ್ಯೆ ಶರಣವ್ವ ಜಿಡ್ಡಿಬಾಗೀಲ, ಶಬ್ಬೀರ ಖಾಜಿ, ಪರಪ್ಪ ಜಿಡ್ಡಿಬಾಗೀಲ, ಈರಪ್ಪ ಕಂಬಲಿ, ನೀಲಪ್ಪ ಹವಳಪ್ಪನರ, ಈರಪ್ಪ ಮಣ್ಣೇರಿ, ಸಂಗಪ್ಪ ಗಾಣಿಗೇರ ಮುಂತಾದವರು ಇದ್ದರು. ಸಂಗಪ್ಪ ಜಿಡ್ಡಿಬಾಗೀಲ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement