ಲೋಹ ಸಂಗ್ರಹ ಅಭಿಯಾನ
ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಪಂ ವ್ಯಾಪ್ತಿಯ ಚಿಲ್ಝರಿ ಗ್ರಾಮದಲ್ಲಿ ಸರ್ಧಾರ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆ ಲೋಹ ಸಂಗ್ರಹಣಾ ಅಭಿಯಾನ ಜರುಗಿತು. ಬಾಗಲಕೋಟೆ ಟೆಂಗಿನ ಮಠದ ರೇವಣಸಿದ್ದೇಶ್ವರ ಶ್ರೀಗಳು, ಗುಳೇದಗುಡ್ಡ ಅಭಿನಯ ಒಪ್ಪತ್ತೇಶ್ವರ ಶ್ರೀಗಳು, ಚಿಲ್ಝರಿ ಶಿವಬಸಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ, ಮಾಜಿ ಸಚಿವ ಕೆ.ಜಿ. ಬಂಡಿ ಉದ್ಘಾಟಿಸಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಬಿ.ಎಂ. ಸಜ್ಜನ, ದುರ್ಗವ್ವ ಚವಟಗಿ, ಲಲಿತಾ ಪೂಜಾರ, ಅಶೋಕ ವನ್ನಾಲ, ಮುತ್ತಯ್ಯ ಬಾಳಿಕಾಯಿಮಠ, ಶಿವರಾಜ ಗೌಡ್ರ, ಈಶಪ್ಪ ರಾಠೋಡ, ದೊಡ್ಡನಗೌಡ ಗೌಡ್ರ, ಶಿವಪುತ್ರಪ್ಪ ಕಡಬಲಕಟ್ಟಿ, ಸಂತೋಷ ಉಪ್ಪಾರ, ಈಶಪ್ಪ ಉಪ್ಪಾರ, ಬಸವರಾಜ ಕಡಬಲಕಟ್ಟಿ ಉಪಸ್ಥಿತರಿದ್ದರು. ಆರ್.ಕೆ. ಚವ್ಹಾಣ ವಿಶೇಷ ಉಪನ್ಯಾಸ ನೀಡಿದರು.