ವಿವೇಕಾನಂದರ ಆದರ್ಶ ಪಾಲಿಸಿ: ಡಾ. ದಂಡಿನ
ಗದಗ: ಯುವಕರಿಗೆ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಸ್ಫೂರ್ತಿದಾಯಕವಾಗಿವೆ. ಸ್ವಾಮಿ ವಿವೇಕಾನಂದರ ತತ್ವ-ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಡಾ. ಬಿ.ಎಫ್. ದಂಡಿನ ಹೇಳಿದರು.
ಅವರು ಸ್ಥಳೀಯ ಕೆಎಸ್ಎಸ್ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೆಎಸ್ಎಸ್ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ 152ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆವಿಎಸ್ಆರ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಎಸ್.ಎಚ್. ದೇಶಪ್ಪನವರ ಮಾತನಾಡಿ, ವಿವೇಕಾನಂದರು ಭರವಸೆ ಇಟ್ಟಿದ್ದು ಯುವಕರಲ್ಲಿ. ಯುವಕರು ಜಾಗ್ರತರಾಗಿ ದೇಶ ಕಟ್ಟುವ ಕೆಲಸ ಮಾಡಿ ಎಂದರು. ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಸ್ವಾಗತಿಸಿ, ಡಾ. ಶರಣಬಸವ ವೆಂಕಟಾಪುರ ಪರಿಚಯಿಸಿದರು. ಹಿರೇಮಠ ಪ್ರಾರ್ಥಿಸಿ, ಡಾ. ಎಂ.ಎಸ್. ನರೆಗಲ್ಲ ನಿರೂಪಿಸಿದರು. ಜಿ.ಸಿ. ಜಂಪಣ್ಣವರ ವಂದಿಸಿದರು.