ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸೇವಾದಳ ಭಾವೈಕ್ಯದ ಪ್ರತೀಕ

Srinivasa Murthy VN
Updated On : 3 Feb 2014, 11:52 am

ಕನ್ನಡಪ್ರಭ ವಾರ್ತೆ, ರೋಣ, ಫೆ. 2
ಶಾಲಾ ಮಕ್ಕಳಲ್ಲಿ ಶಿಸ್ತು, ನಾಯಕತ್ವ, ದೇಶಾಭಿಮಾನ, ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವಲ್ಲಿ ಭಾರತ ಸೇವಾದಳವು ಪ್ರತಿಕವಾಗಿದೆ. ಪ್ರತಿ ಶಾಲೆಯಲ್ಲಿಯೂ ಸೇವಾದಳ ಕಾರ್ಯ ಅತ್ಯಂತ ಮುಖ್ಯವಾಗಿದೆ ಎಂದು ತಾಲೂಕು ಬಿಇಒ ಡಿ.ಐ. ಅಸುಂಡಿ      ಹೇಳಿದರು.
ಅವರು ಪಟ್ಟಣದ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಭಾರತ ಸೇವಾದಳ ಹಾಗೂ ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಭಾರತ ಸೇವಾದಳ ಶಿಕ್ಷಕರ ಮಿಲಾಪ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಶಿಸ್ತು, ನಾಯಕತ್ವ ಗುಣ ಮತ್ತು ಸಂಘಟನಾತ್ಮಕ ವ್ಯಕ್ತಿತ್ವವನ್ನು ಮೂಡಿಸುವಲ್ಲಿ ಸೇವಾದಳ ಸಹಕಾರಿಯಾಗಿದೆ. ಸೇವಾದಳದಂತಹ ಆದರ್ಶವಾದದ ಸಂಸ್ಥೆಯನ್ನು ಸ್ಥಾಪಿಸುರುವ ಡಾ. ನಾ.ಸು. ಹರ್ಡೀಕರ್ ಅವರು ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈಗಾಗಲೇ ರೋಣ ತಾಲೂಕಿನಲ್ಲಿ ಸುಮಾರು 62 ಶಾಲೆಗಳಲ್ಲಿ ಸೇವಾದಳ ಸ್ಥಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿ ಶಾಲೆಯಲ್ಲಿ ಸೇವಾದಳ ಸ್ಥಾಪಿಸಲು ಸೂಚನೆ ನೀಡಲಾಗುವುದು. ಶಿಕ್ಷಕರು ಮಕ್ಕಳಿಗೆ ಸೇವಾದಳ ಮಹತ್ವ ಮತ್ತು ಉದ್ದೇಶ ತಿಳಿಸುವಲ್ಲಿ ಪ್ರಾಮಾಣಿಕ ಶ್ರಮ ಅಗತ್ಯವಾಗಿದೆ ಎಂದರು.  ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಶ್ರೀಗಳು, ಸೇವಾದಳ ಜಿಲ್ಲಾ ಸಂಘಟಿಕ ಕುಮಾರಸ್ವಾಮಿ ಬಳ್ಳಾರಿ ಮತ್ತು ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಯಡಳ್ಳಿ ಮಾತನಾಡಿದರು.   ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಎಸ್.ಎಚ್. ನೀಲಗಾರ, ಕ್ಷೇತ್ರ ಸಮನ್ವಯ ಅಧಿಕಾರಿ ಐ.ಎಸ್. ಮಡಿವಾಳರ, ಶಿಕ್ಷಣ ಸಂಯೋಜಕ ದಾಸರ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ವೈ.ಡಿ. ಗಾಣಿಗೇರ, ಕೆ.ಬಿ. ಗಡಾದ, ಜಗದೀಶ ಬೂದಿಹಾಳ, ಎಸ್.ಎಸ್. ತಳ್ಳಿಹಾಳ, ಆರ್.ಎಸ್. ಬುರ್ಲಿ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಲ್. ಅವಾರಿ ಸ್ವಾಗತಿಸಿ, ನಿರೂಪಿಸಿದರು. ಎ.ಎಸ್. ಗದಿಗೇರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement