ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಂಚೆ ಕಚೇರಿಗೆ ಸಿಬ್ಬಂದಿ ನೇಮಿಸಲು ಆಗ್ರಹ

Srinivasa Murthy VN
Updated On : 5 Feb 2014, 12:32 pm

ಗಜೇಂದ್ರಗಡ: ಸ್ಥಳೀಯ ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನ ಪಡೆಯಲು ಸಾರ್ವಜನಿಕರು ಕಚೇರಿಗೆ ಅಲೆದಾಡಿ ಪರದಾಡುವಂತಾಗಿದೆ. ಕೂಡಲೇ ಕಚೇರಿಗೆ ಹೆಚ್ಚಿನ ಸಿಬ್ಬಂದಿ ಒದಗಿಸಲು ಮೇಲಧಿಕಾರಿಗಳು ಮುಂದಾಬೇಕೆಂದು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘ ಅಧ್ಯಕ್ಷ ಎ.ಕೆ. ಹೊಸಂಗಡಿ, ಜಿಲ್ಲೆಯ ವಾಣಿಜ್ಯ ನಗರಿ ಖ್ಯಾತಿ ಹೊಂದಿರುವ ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಹಲವಾರು ಗ್ರಾಮಗಳ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಈ ಅಂಚೆ ಕಚೇರಿಯನ್ನೆ ಅವಲಂಬಿಸಿದ್ದಾರೆ. ಆದರೆ, ಸಿಬ್ಬಂದಿ ಕೊರತೆ ನೆಪವೊಡ್ಡಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಈ ಕುರಿತು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಅಂಗವೈಕಲ್ಯರು, ವೃದ್ಧರು ಸರ್ಕಾರ ನೀಡುವ ಗೌರವಧನ ಪಡೆಯಲು ಕಚೇರಿಗೆ ಒಂದು ಬಾರಿ ಬರುವುದೇ ದುಸ್ತರ. ಅಂತಹದ್ದರಲ್ಲಿ ಪದೇಪದೇ ಅಂಚೆ ಕಚೇರಿಗೆ ಅಲೆದಾಡಿ ಗೋಳಾಡುತ್ತಿದ್ದಾರೆ. ಈ ಕುರಿತು ಸ್ಥಳೀಯ ಅಂಚೆ ಕಚೇರಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕ ಸೇವೆಯಲ್ಲಿ ಅಲ್ಪ ವಿಳಂಬವಾಗುತ್ತಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿರುವುದನ್ನು ಗಮನಿಸಿ ಸ್ವತಃ ಖಜಾನೆ ಇಲಾಖೆಯಿಂದ ಸಿ.ಡಿ.ಯನ್ನು ಕಳುಹಿಸಿದರೂ ಸಾರ್ವಜನಿಕರ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಗಜೇಂದ್ರಗಡ ಅಂಚೆ ಕಚೇರಿಗೆ ಹೆಚ್ಚಿನ ಸಿಬ್ಬಂದಿ ಒದಗಿಸಿ ಸಾರ್ವಜನಿಕರ ಸೇವೆ ತ್ವರಿತಗತಿಯಲ್ಲಿ ನಿರ್ವಹಿಸಲು ಮುಂದಾಗದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಗಣೇಶ ಚೌಡಿಮನಿ, ಶಿವಾಜಿ ಮಾಳೋತ್ತರ, ಬಸವರಾಜ ಕುರಿ, ಈರಪ್ಪ ತಾಳಿಕೋಟಿ, ಶಿವಪ್ಪ ಶೀರಿ, ಪ್ರಾಣೀಶ ಫಲಮಾರಿ, ಗೀತಾ ಬಡಿಗೇರ, ಶಾಂತಾ ತಾಳಿಕೋಟಿ, ಶೋಭಾ ಕುರಿಯವರ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement