ಶರಣರ ಮಾರ್ಗದರ್ಶನದಲ್ಲಿ ಸಾಗಿ
ನರಗುಂದ: ಶರಣರ ತತ್ವ ಪಾಲನೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ರಾಮದುರ್ಗ ಶಿವಮುರ್ತೇಶ್ವರ ಮಠದ ಶಾಂತವೀರ ಶ್ರೀಗಳು ಹೇಳಿದರು.
ಅವರು ತಾಲೂಕಿನ ಬೆಳ್ಳೇರಿ ಗ್ರಾಮದ ಶಿವಾನಂದ ಮಠದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ 18ನೇ ಮಾಸಿಕ ಶಿವಾನುಭವ ಹಾಗೂ ಅಂಬಿಗರ ಚೌಡಯ್ಯನ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಈ ಆಧುನಿಕ ಯುಗದಲ್ಲಿ 12ನೇ ಶತಮಾನದ ಬಸವಾದಿ ಶಿವಶರಣರ ತತ್ವಗಳು ಹೆಚ್ಚು ಜನರು ಅಳವಡಿಸಿಕೊಳ್ಳದೇ ಇರುವುರಿಂದ ಇಂದು ಹಲವರು ಮಾನಸಿಕ ಒತ್ತಡದಿಂದ ಬಳಲುವ ಸ್ಥಿತಿ ಉದ್ಭವವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿ ದಿನ ಜ್ಞಾನ, ಯೋಗ ಮುಂತಾದವುಗಳನ್ನು ಮಾಡುತ್ತಾ ಮಾನಸಿಕ ಒತ್ತಡದಿಂದ ಹೊರಬರಬೇಕು ಎಂದರು.
ಹುಲಸೂರಿನ ಗುರುಬಸವೇಶ್ವರ ಮಠದ ಶಿವಾನಂದ ಶ್ರೀಗಳು ಮಾತನಾಡಿದರು. ಈ ಸಂದರ್ಭದಲ್ಲಿ ಸಚ್ಚಿದಾನಂದ ಶ್ರೀಗಳು, ಬಸನಗೌಡ ಹಿರೇಗೌಡ್ರ, ಡಾ. ಸಂತೋಷ ಯಾವಗಲ್, ಶಂಕರಗೌಡ್ರ ಶಿರಿಯಪ್ಪಗೌಡ್ರ, ಎ.ಬಿ. ವಾಲಿಕಾರ, ಜಿ.ಆರ್. ಸುಣಗಾರ, ರುದ್ರಗೌಡ ಪಾಟೀಲ, ದೇವರಡ್ಡಿ ಚೌಡರಡ್ಡಿ, ಬಸವಾನಂದ ಶ್ರೀಗಳು, ಬಸನಗೌಡ ಹಿರೇಗೌಡರ, ಶಿವಾನಂದ ಹಿರೇಮಠ, ಈರಣ್ಣ ಶಿರಸಂಗಿ, ಕಾಂತಯ್ಯ ಹಿರೇಮಠ, ಗದಿಗಪ್ಪ ಕೊಣ್ಣೂರ, ಮಂಜುಳಾ ಅಂಬಿಗೇರ ಮುಂತಾದವರು ಉಪಸ್ಥಿತರಿದ್ದರು.