ಜಿನ್ನಿಂಗ್ ಫ್ಯಾಕ್ಟರಿಗೆ ಬೆಂಕಿ
ಗದಗ: ನಗರದ ರೋಟರಿ ವೃತ್ತದ ಸಮೀಪದಲ್ಲಿರುವ ಲಕ್ಷ್ಮೀ ನಾರಾಯಣ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಮಂಗಳವಾರ ಸಂಜೆ ಆಕಸ್ಮಿಕ ಅಗ್ನಿ ಅವಘಡದಲ್ಲಿ 40 ಲಕ್ಷಕ್ಕೂ ಅಧಿಕ ಮೌಲ್ಯದ ಹತ್ತಿ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ದೀಪಕ್ ಟೇಡರ್ಸ್ನ ಮಾಲೀಕ ದಾನಯ್ಯ ಗಣಾಚಾರಿ ಎಂಬುವರಿಗೆ ಸೇರಿದ ಹತ್ತಿ ಎನ್ನಲಾಗಿದ್ದು, 800ಕ್ಕೂ ಅಧಿಕ ಹತ್ತಿ ಅಂಡಿಗೆಗಳು ಬೆಂಕಿಗಾಹುತಿಯಾಗಿವೆ.