ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಾಲಕಿಯರ ವಸತಿ ನಿಲಯದ ಅಡುಗೆ ಸಿಬ್ಬಂದಿ ಕಾಯಮಾತಿ

Srinivasa Murthy VN
Updated On : 16 Jul 2014, 10:45 am

ಗಜೇಂದ್ರಗಡ, ಜು. 15
ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯದ ಬಾಣಸಿಗರನ್ನು ಸೇವೆಯಿಂದ ತೆಗೆದುಹಾಕುವ ನಿರ್ಧಾರ ಕೈಬಿಟ್ಟು ಕಾಯಂಗೊಳಿಸಬೇಕೆಂದು ಮಹಿಳಾ ಅಡುಗೆ ತಯಾರಕರು ಒತ್ತಾಯಿಸಿದ್ದಾರೆ.
ಹಿಂದುಳಿದ ವರ್ಗಗಳ ಇಲಾಖೆ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶ್ರಮ ಶಾಲೆಯಲ್ಲಿನ ಅಡುಗೆ ತಯಾರಕರನ್ನು ಈ ವಸತಿ ನಿಲಯಕ್ಕೆ ವರ್ಗಾಯಿಸಿ, 8-10 ವರ್ಷದಿಂದ ಅಡುಗೆ ತಯಾರಕರಾಗಿ ಸೇವೆ ಸಲ್ಲಿಸುತ್ತಿದ್ದ ನಮ್ಮನ್ನು ಸೇವೆಯಿಂದ ತೆಗೆದು ಹಾಕಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇ ವೃತ್ತಿಯನ್ನು ನಂಬಿ ಬದುಕು ಸಾಗಿಸುತ್ತಿರುವ ನಮಗೆ ಇದೀಗ ಕೆಲಸದಿಂದ ತೆಗೆದು ಹಾಕುವ ಸುದ್ದಿ ತೀವ್ರ ಆತಂಕವನ್ನುಂಟು ಮಾಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement