ಶೀಘ್ರ ಬರಗಾಲ ಕಾಮಗಾರಿ ಪ್ರಾರಂಭಿಸಲು ಬಿಜೆಪಿ ರೈತ ಮೋರ್ಚಾ ಒತ್ತಾಯ
ಗದಗ: ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಜಿಲ್ಲೆಯ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮುಂಗಾರು ಬೆಳೆಗಳು ವಿಫಲವಾಗಿದ್ದು ರೈತರ ಸಂಕಷ್ಟವನ್ನು ಅರಿತು ಸರ್ಕಾರ ಕೂಡಲೇ ಬರಗಾಲ ಕಾಮಗಾರಿ ಪ್ರಾರಂಭಿಸಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಘಟಕದ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ ಒತ್ತಾಯಿಸಿದರು.
ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗದಗ ಗ್ರಾಮೀಣ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಬೆಲೆಗೆ ಬೀಜ ಹಾಗೂ ಗೊಬ್ಬರ ಕೊಂಡು ಕೆಲ ರೈತರು ಹೆಸರು, ಶೇಂಗಾ ಬಿತ್ತಿದ್ದು ಮಳೆ ಸರಿಯಾಗಿ ಆಗದ ಕಾರಣ ಬೆಳೆಗಳು ಒಣಗಿವೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದು ಸರ್ಕಾರ ನಿದ್ರೆಯಿಂದ ಎಚ್ಚೆತ್ತುಕೊಂಡು ರೈತರಿಗೆ ಸಹಾಯಕ್ಕೆ ಬರಬೇಕೆಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ರೈತ ಮೋರ್ಚಾ ಅಧ್ಯಕ್ಷ ಶರಣಪ್ಪಗೌಡ ಬಳ್ಳೊಳ್ಳಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಎಂ. ಪಟ್ಟಣಶೆಟ್ಟಿ, ಗದಗ ಗ್ರಾಮೀಣ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಪತ್ರಿ, ಎಂ.ಎಸ್. ಮೂಲಿಮನಿ, ಮಲ್ಲಪ್ಪ ಖಾನಾಪುರ, ರಾಮಣ್ಣ ಹಳ್ಳಿ, ಮಂಜುನಾಥ ಸಂದಿಮನಿ, ಬಸವಣ್ಣೆಪ್ಪ ಬೆಟಗೇರಿ, ಶರಣಪ್ಪ ಬೋಳನವರ, ಶಂಕ್ರಪ್ಪ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.
ಕಾನೂನು ಅರಿವು ನೆರವು ಕಾರ್ಯಕ್ರಮ
ನರಗುಂದ: ಪಟ್ಟಣದ ಆರೋಗ್ಯ ಇಲಾಖೆಯ ಆವರಣದಲ್ಲಿ ಮಂಗಳವಾರ ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು. ದಿವಾಣಿ ನ್ಯಾಯಾಧೀಶೆ ಕಾವೇರಿ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಎಸ್. ಪಾಟೀಲ, ಡಾ. ಶಶಿ ಪಾಟೀಲ, ನ್ಯಾಯವಾದಿಗಳಾದ ಡಿ.ಎನ್. ಭೋಸಲೆ, ಕೆ.ವೈ. ಹೂಲಿ, ಎಂ.ಡಿ. ಹರಪ್ಪನಹಳ್ಳಿ, ಬಿ.ಎಸ್.ದೇಶಪಾಂಡೆ, ಬಿ.ಎಸ್. ಹುಂಬಿ, ಡಾ. ಶ್ರೀದೇವಿ ಗುನ್ಯಾರಿ, ಸುಪ್ರೀತಾ ಹಾಜರಿದ್ದರು.