ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಗೀತ ಆಲಿಸುವುದರಿಂದ ಏಕಾಗ್ರತೆ

Srinivasa Murthy VN
Updated On : 16 Jul 2014, 10:45 am

ಗಜೇಂದ್ರಗಡ: ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡದಲ್ಲಿ ಶಾಸ್ತ್ರೀಯ ಸಂಗೀತ ಪರಿಸರ ನಿರ್ಮಿಸಲು ಸರ್ವ ಸಮುದಾಯದ ಜನ ಮುಂದಾಗಬೇಕು. ಸಂಗೀತ ಆಲಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಚುಟುಕು ಸಾಹಿತಿ ಅನಿಲ ವೈದ್ಯ ಹೇಳಿದರು. ಅವರು ಸ್ಥಳೀಯ ಶ್ರೀರಾಮ ದೇಗುಲದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಶನಿವಾರ ಸಂಜೆ ಶಾರದಾ ಸಂಗೀತ ವಿದ್ಯಾಲಯ ವತಿಯಿಂದ ನಡೆದ ಸಂಗೀತ ಸಮಾರಂಭದಲ್ಲಿ ಮಾತನಾಡಿದರು. ಪಠ್ಯಗಳ ಜತೆ ಶಾಸ್ತ್ರೀಯ ಸಂಗೀತ ಕಲಿಕೆ, ಆಲಿಸುವುದರಿಂದ ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚುತ್ತದೆ. ಅನಕ್ಷರಸ್ಥರೂ ಶಾಸ್ತ್ರೀಯ ಸಂಗೀತ ಕಲಿಯಬಹುದು. ಗುರುವಿನ ಬಗ್ಗೆ ಭಯ, ಭಕ್ತಿ ಹಾಗೂ ಪ್ರೀತಿ ಹೊಂದಿದ ಶಿಷ್ಯನಿಗೆ ಜ್ಞಾನ ಒಲಿಯುವುದು ನಿಶ್ಚಿತ. ಸತತ ಪರಿಶ್ರಮ ಪಟ್ಟರೆ ಮಾತ್ರ ಶಾಸ್ತ್ರೀಯ ಸಂಗಿತ ಸಾಧನೆ ಸಾಧ್ಯ ಎಂದರು.
ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಸಾಧನೆಗೆ ಗುರು ಬೇಕು. ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನ ಬೆಳಕಿನ ದಾರಿ ತೋರಿಸುವ ಗುರು 2ನೇ ತಾಯಿ ಇದ್ದಂತೆ. ಭಗವಂತನಿಗೆ ನಮಸ್ಕರಿಸುವ ಮೊದಲು ಗುರುವಿಗೆ ನಮಿಸಬೇಕು. ಅಂದಾಗ ಎಲ್ಲ ವಿದ್ಯೆ ಒಲಿಯುವುದು. ಪವಿತ್ರ ಭಾವನೆಯಿಂದ ಸದಾ ಗುರು ಸ್ಮರಣಿ ಮಾಡುವದರಿಂದ ಜೀವನ ಪಾವನಗೊಂಡು ಬದುಕಲ್ಲಿ ನೆಮ್ಮದಿ ದೊರಕಲಿದೆ ಎಂದರು. ಬಾಬಣ್ಣ ನಾವಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾಪೀಠ ಅಧ್ಯಕ್ಷೆ ಶಾರದಾ ಕುಲಕರ್ಣಿ, ಸಂಗೀತ ವಿದ್ಯಾ ಪೀಠದ ಶಿಕ್ಷಕಿ ಗಾಯಿತ್ರಿ ಕುಲಕರ್ಣಿ ಉಪಸ್ಥಿತರಿದ್ದರು. ಸಂಗೀತ ಪ್ರಾಧ್ಯಾಪಕಿ ಅಭಿನೇತ್ರಿ ರೇವಣಕರ ಅವರಿಂದ ನಡೆದ ಸಂಗೀತ ಕಚೇರಿ ಜರುಗಿತು. ಜತೆಗೆ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನಡೆದ ತಬಲಾವಾದನ, ಮಕ್ಕಳ ಸ್ಪರ್ಧಾ ಗೀತೆ ಜನಮನ ಸೆಳೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಕೃಷ್ಣಕುಮಾರ ಕುಲಕರ್ಣಿ ಸ್ವಾಗತಿಸಿದರು. ರಾಜೇಶ್ವರಿ ವಲ್ಯಾಪುರಿ ನಿರೂಪಿಸಿದರು. ನಾರಾಯಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement