ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭ್ರಷ್ಟಾಚಾರ: ತನಿಖಾಧಿಕಾರಿಗಳಿಗೆ ತಡೆ

Srinivasa Murthy VN
Updated On : 5 Jun 2014, 12:52 pm

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 4
ಸಮೀಪದ ರಾಜೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತನಿಖಾ ತಂಡ ರಚಿಸಿ ಕಾಮಗಾರಿ ಪರಿಶೀಲನೆಗೆ ಆದೇಶಿಸಿದಂತೆ ಭೈರಾಪುರ ಗ್ರಾಮಕ್ಕೆ ಅಧಿಕಾರಿಗಳ ತಂಡ ತೆರಳಿದ್ದಾಗ ಗ್ರಾಪಂ ಸದಸ್ಯರು ಹಾಗೂ ಅವರ ಬೆಂಬಲಿಗರು ನಮ್ಮ ಗ್ರಾಮದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಹೀಗಾಗಿ ನಮ್ಮ ಗ್ರಾಮಕ್ಕೆ ಪರಿಶೀಲನೆಗೆ ಬರಬೇಡಿ ಎಂದು ತನಿಖೆ ತಂಡದ ಕಾರ್ಯಕ್ಕೆ ಅಡೆತಡೆಯುಂಟು ಮಾಡಿದರು.
ರಾಜೂರು ಗ್ರಾಪಂ ವ್ಯಾಪ್ತಿಗೊಳಪಡುವ ದಿಂಡೂರು, ಕಾಲಕಾಲೇಶ್ವರ, ಭೈರಾಪುರ, ಭೈರಾಪುರ ತಾಂಡಾ, ರಾಜೂರು ಗ್ರಾಮಗಳಿಗೆ ಸರ್ಕಾರ ನೀಡಿದ ಅನುದಾನ ಸಮರ್ಪಕ ಬಳಕೆಯಾಗದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಗ್ರಾಮಸ್ಥರು ದೂರಿದ್ದರು. ಜಿಲ್ಲಾಡಳಿತ ಕಾಮಗಾರಿ ಪರಿಶೀಲನೆಗೆ ಆದೇಶಿಸಿದೆ. ಅದರಂತೆ ಗ್ರಾಮದಲ್ಲಿ ನಡೆದ ಕಾಮಗಾರಿ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದರು. ಬಳಿಕ ಕಾಮಗಾರಿ ಪರಿಶೀಲಿಸಲು ಅನುಕೂಲ ಕಲ್ಪಿಸಲಾಯಿತು.
ಇದೇ ಸಂದರ್ಭ ಗ್ರಾಮದ ರೈತರೊಬ್ಬರು ನಮ್ಮ ಹೆಸರಲ್ಲಿ ಒಳಗಟ್ಟಿ ನಿರ್ಮಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣವನ್ನು ಅಧಿಕಾರಿಗಳು ಕೊಳ್ಳೆ ಹೊಡೆದಿದ್ದಾರೆ. ಈ ರೀತಿ ಬೇರೆಯವರ ಹೆಸರಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಈ ಪ್ರಕರಣದಲ್ಲಿ ಕಂಡು ಬರುತ್ತಿದೆ. ಭ್ರಷ್ಟಾಚಾರದಲ್ಲಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಕಳಕೇಶ ಉಕ್ಕಿಸಲ, ಶಶಿಧರ ಹೂಗಾರ ವಿ.ಬಿ. ಹಪ್ಪಳದ,ಅಮರೇಶ ನೂಲ್ವಿ ಹನಮಂತ ಹಿತ್ತಲಮನಿ, ಅಬ್ದುಲಸಾಬ ಮುಜಾವರ, ತುಕ್ಕಪ್ಪ ರಾಠೋಡ್, ಕಳಕಪ್ಪ ರಾಠೋಡ, ಸುರೇಶ ಪಾಟೀಲ, ಬಾಬು ಮಜಾವರ, ಶರೀಫ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement