ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಛಬ್ಬಿ: ಮುಖ್ಯ ಶಿಕ್ಷಕರಿಗೆ ನೋಟಿಸ್

Srinivasa Murthy VN
Updated On : 30 Jun 2014, 11:06 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜೂ. 29
ಗುಣಮಟ್ಟದ ಬಿಸಿಯೂಟಕ್ಕಾಗಿ ಶನಿವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಛಬ್ಬಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮತ್ತು ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ತಿಳಿಸಿದ್ದಾರೆ.
ಅವರು ಭಾನುವಾರ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ನಂತರ ಮಾತನಾಡಿದರು.
ಕಳೆದ 2-3 ತಿಂಗಳಿನಿಂದಲೂ ಮಕ್ಕಳು ಅಪೌಷ್ಟಿಕ, ಅರೆ ಬೆಂದ ಆಹಾರವನ್ನು ಸೇವಿಸುತ್ತಿರುವ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಗಮನಕ್ಕೆ ತಂದಿಲ್ಲ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಗುಂಪುಗಾರಿಕೆ ಮಾಡದೇ ಹೊಂದಾಣಿಕೆಯಿಂದ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು.
ಮುಖ್ಯವಾಗಿ ಮಕ್ಕಳಿಗೆ ಬಿಸಿಯೂಟ ಉಣಬಡಿಸುವ ಮೊದಲು ಶಿಕ್ಷಕರು ಗಮನಿಸಿ ಮಕ್ಕಳಿಗೆ ಕೊಡಬೇಕು. ಇದರಲ್ಲಿ ಅಡುಗೆ ಸಿಬ್ಬಂದಿಯ ಪಾತ್ರವೂ ಬಹಳ ಮುಖ್ಯವಾಗಿದ್ದು, ಅಡುಗೆ ಸಿಬ್ಬಂದಿ ಬಗ್ಗೆಯೂ ಗ್ರಾಮಸ್ಥರಿಂದ ದೂರು ಕೇಳಿ ಬಂದಿದ್ದು, ವಾರದಲ್ಲಿ ತಮ್ಮ ಎಲ್ಲ ವ್ಯವಸ್ಥೆ ಬದಲಿಸಿಕೊಂಡು ಗ್ರಾಮದ ಹಿರಿಯರ ಮತ್ತು ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಕೆಲಸ ನಿರ್ವಹಿಸಿಕೊಂಡು ಹೋಗದೇ ಇದ್ದಲ್ಲಿ ತಮ್ಮ ಮೇಲೆ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಜಾನು ಲಮಾಣಿ, ಗ್ರಾಪಂ ಅಧ್ಯಕ್ಷ ಶಿವಪ್ಪ ಹರತಾಳ, ಸದಸ್ಯ ದೇವಪ್ಪ ಲಮಾಣಿ, ಹನುಮಂತಗೌಡ್ರ ಪಾಟೀಲ, ನಿಂಗನಗೌಡ್ರ ಪಾಟೀಲ, ವಾಸು ಕುಬೇರ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಬಿ.ಬಿ. ಅಡರಕಟ್ಟಿ, ಎನ್.ಕೆ. ಲಮಾಣಿ, ಲೋಕನಾಥ ಲಮಾಣಿ, ಷಣ್ಮುಖಪ್ಪ ಪೂಜಾರ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಬಿ.ಎಂ. ಚವ್ಹಾಣ, ಕೆ.ಎ. ಇಳಿಗೇರ, ಶಿಕ್ಷಕ ವಿ.ಎಂ. ಮೆಣಸಿನಕಾಯಿ, ಎಸ್.ವಿ. ಮೇಕಳಿ, ಜಿ.ಡಿ. ಈರಕ್ಕನವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement