ಜಾತಿ ವಿಷಯದಲ್ಲಿ ಭಾರತ ಅತ್ಯಂತ ನೀಚ ದೇಶ: ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜೂ. 29
ಸ್ವಾತಂತ್ರ್ಯ ದೊರೆತು 65 ವರ್ಷಗಳು ಕಳೆದರೂ ಇನ್ನೂ ಅನೇಕ ಗ್ರಾಮಗಳಲ್ಲಿ, ದೇವಸ್ಥಾನಗಳಲ್ಲಿ, ಧರ್ಮಗಳಲ್ಲಿ, ಧರ್ಮಗ್ರಂಥಗಳಲ್ಲಿ ಜಾತೀಯತೆಯ ವಿಷಬೀಜ ಹೋಗಿಲ್ಲ ಭಾರತ ಜಾತಿ ವಿಷಯದಲ್ಲಿ ಬಹಳ ನೀಚ ದೇಶ, ಕೆಟ್ಟದೇಶ, ಪಾಪದ ದೇಶವಾಗಿದೆ ಎಂದು ಗದಗ, ಡಂಬಳ ಸಂಸ್ಥಾನ ಮಠದ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ಅವರು ಶನಿವಾರ ತಡರಾತ್ರಿ ಮುಂಡರಗಿ ಪಟ್ಟಣದ ತೋಂಟದಾರ್ಯ ಮಠದಲ್ಲಿ ನಡೆದ ಶರಣ ತತ್ವದರ್ಶನ ಪ್ರವಚನ ಹಾಗೂ 69ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಕೆಲವರು 'ವಸುದೈವ ಕುಟುಂಬಂ' ಎಂದು ಹೇಳುತ್ತಾರೆ. ಅಂತಹ ವಾತಾವರಣ ನಮ್ಮಲ್ಲಿ ಎಂದಿಗೂ ನಿರ್ಮಾಣ ಮಾಡಿಲ್ಲ. ಜನರಲ್ಲಿ ಜಾತೀಯತೆಯನ್ನು ಹೊಡೆದೋಡಿಸುವ ಉದ್ದೇಶದಿಂದ ನೂತನ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಪ್ರವಚನ ಉದ್ಘಾಟಿಸಿ ಮಾತನಾಡಿದರು.
ಲೋಕಸಭೆ ಸದಸ್ಯ ಶಿವಕುಮಾರ ಉದಾಸಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ದೊಡ್ಡಬಸಣ್ಣ ಕಾಲವಾಡ ಮಾತನಾಡಿದರು. ಮಹಾಂತದೇವರು ಪ್ರವಚನ ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಪುರಸಭೆಗೆ ನೂತನ ಅಧ್ಯಕ್ಷರಾಗಿರುವ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಭಕ್ತಿ ಸೇವೆ ವಹಿಸಿಕೊಂಡಿದ್ದ ಶ್ರೀನಿವಾಸ ದೊಡ್ಡಮನಿ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು. ಪ್ರವಚನ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ, ಲಿಂಗರಾಜಗೌಡ ಪಾಟೀಲ, ಎ.ಪಿ. ದಂಡಿನ, ಅಶೋಕ ಹುಬ್ಬಳ್ಳಿ, ಕೊಟ್ರಯ್ಯ ಅಮರಗೋಳ ಹಿರೇಮಠ, ಗಿರೀಶಗೌಡ ಪಾಟೀಲ, ಧ್ರುವಕುಮಾರ ಉಪಸ್ಥಿತರಿದ್ದರು.