ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶರಣರ ಜೀವನ ಸಂದೇಶ ಪಾಲಿಸಿ

Srinivasa Murthy VN
Updated On : 30 Jun 2014, 11:07 am

ಗದಗ: 12ನೇ ಶತಮಾನದಲ್ಲಿ ಶರಣರು ಕ್ರಾಂತಿಗೈದ ಕಾಯಕ ನಿಷ್ಠೆ, ಧರ್ಮ ನಿಷ್ಠೆ ಅನುಷ್ಠಾನಕ್ಕೆ ತರುವುದರ ಮೂಲಕ ಇಂದಿನ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆ, ಕಂದಾಚಾರ, ಭ್ರಷ್ಟಾಚಾರ ಸ್ತ್ರೀ ಶೋಷಣೆ  ಹೋಗಲಾಡಿಸಬೇಕಾಗಿದೆ ಎಂದು ಅಡ್ನೂರು ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯರು ಕರೆ ನೀಡಿದರು.
ಅವರು ನಗರದ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಭಾನುವಾರ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಗದಗ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ವಚನಕಾರರು ಜನಸಾಮಾನ್ಯರಿಗೆ ಹತ್ತಿರವಾದ ಜೀವನ ಸಂದೇಶಗಳನ್ನು ವಚನಗಳ ಮೂಲಕ ಸಾರಿದರು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಟ್ಟ ಕೊಡುಗೆ ಅಮೋಘವಾದದ್ದು ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ ಗದಗ ಜಿಲ್ಲಾ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಗಣೇಶ ಸುಲ್ತಾನಪುರ, ಅತಿಥಿಗಳಾಗಿ ಆಗಮಿಸಿದ್ದ ಆನಂದ ಪೋತ್ನಿಸ, ಲಯನ್ಸ್ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಜೆ.ಡಿ. ಉತ್ತರಕರ, ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಹೇಮಂತ ದಳವಾಯಿ, ಎಂ.ಎಂ. ಸಾಲಿಮಠ ಮಾತನಾಡಿದರು. ಸುಕಾಮಾರ ಸೋನಾವನೆ, ವನಶ್ರೀ ಹೂಗಾರ, ಅಮರೇಶ ಶಿವರೆಡ್ಡಿ, ಎಸ್.ಎ. ಹಿರೇಮಠ, ಪಿ.ಕೆ. ಕನ್ಯಾಳ, ಎಂ.ಎಂ. ಕುಲಕರ್ಣಿ, ನಿರಂಜನಾ ಹಿರೇಮಠ, ಸುನೀಲ ವೆರ್ಣೇಕರ, ಸಿ.ಯು. ಹುಲಿಕಂತಿಮಠ, ನಿರ್ಮಲಾ ಬಾರಕೇರ, ಎಂ.ಎ. ತೋಟದ, ಜೆ.ಎಚ್. ಕಿಲ್ಲೆದಾರ ನೂತನ ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶರಣು ಗೋಗೇರಿ, ಡಾ. ಪ್ರಭು ಗಂಜಿಹಾಳ, ಅ.ದ. ಕಟ್ಟಿಮನಿ, ತಾರಾ ಬಿ.ಎನ್., ಬಿ.ಬಿ. ಬೆನಕನವಾರಿ, ಟಿ.ಎಂ. ದೇವರಮನಿ, ಲಲಿತಾ ಇಂಗಳಳ್ಳಿ, ವಾಸು ಟಿಕಾನದಾರ. ಸವಿತಾ ಮಣ್ಣೂರ, ಸುರೇಶ ಶ್ರೀಗಿರಿ, ಜಿ.ಎಸ್. ದಾಸರ, ಎ.ಕೆ. ಕೆಂಚನಗೌಡರ, ಪೂರ್ಣಿಮಾ ಕಾಮತ, ಸಾವಿತ್ರಿ ಸಾಂಬ್ರಾಣಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement