ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಸ್‌ಎಂಎಸ್ ಕಿರಿಕ್: ಪಡಿತರ ಫಲಾನುಭವಿಗಳ ಪ್ರತಿಭಟನೆ

Srinivasa Murthy VN
Updated On : 1 Jul 2014, 10:43 am

ಮುಂಡರಗಿ: ಸರ್ಕಾರ ಜಾರಿಗೊಳಿಸುತ್ತಿರುವ ಪಡಿತರ ಕಾರ್ಡುದಾರರ ಮಾಹಿತಿಯನ್ನು ಎಸ್.ಎಂ.ಎಸ್. ಮೂಲಕ ನೋಂದಾಯಿಸುವ ಪದ್ಧತಿ ಅವೈಜ್ಞಾನಿಕವಾಗಿದ್ದು, ಕೂಡಲೇ ರದ್ದುಗೊಳಿಸಬೇಕು ಎಂದು ಸಾವಿರಾರು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಇಲ್ಲಿ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಕಿವಿ, ಕಣ್ಣು ಕೇಳುವುದಿಲ್ಲ ಎಂದು ತಿಳಿದಿದ್ದೇವೆ. ಆದರೆ, ಹೃದಯ ಮತ್ತು ತಲೆ ಕೂಡಾ ಇಲ್ಲ ಎಂದು ಕಿಡಿಕಾರಿದರು. ಓದಲು ಬಾರದ ಬಡ ಪಡಿತರ ಫಲಾನುಭವಿಗಳಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡುವ ಯೋಜನೆ ತರುತ್ತಿದೆ. ಇದು ಸಾಕಷ್ಟು ಬಡವರ ರೇಶನ್ ಕಾರ್ಡ್ ಕಸಿದುಕೊಳ್ಳುವ ಕುತಂತ್ರವಾಗಿದೆ. ಈ ಯೋಜನೆ ರದ್ದುಗೊಳಿಸದಿದ್ದರೆ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು. ರಾಜ್ಯದ 224 ಶಾಸಕರು, ಸರ್ಕಾರ ಪ್ರಚುರ ಪಡಿಸಿದ ಎಸ್.ಎಂ.ಎಸ್. ಮಾದರಿಯನ್ನು ಮಾಡಿ ತೋರಿಸಲಿ, ನಾವು ಹೋರಾಟವನ್ನೇ ಮಾಡುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿಕೊಟ್ಟಂತೆ ಮಾಡಿ ಉಳಿದ ಕುಟುಂಬದ ಸದಸ್ಯರು ಪಡಿತರ ವಂಚಿತಗೊಳಿಸುವ ವ್ಯವಸ್ಥೆ ಇದಾಗಿದೆ ಎಂದು ಆರೋಪಿಸಿದರು. ಈಶ್ವರಪ್ಪ ಹಂಚಿನಾಳ, ಬಸವರಾಜ ನವಲಗುಂದ, ಬಿ.ಎಸ್. ಸಸಿಮಠ, ಕರವೇ ಅಧ್ಯಕ್ಷ ಶಿವು ಬಾರಕೇರ, ಜಿ. ರಾಮಚಂದ್ರ ಮಾತನಾಡಿದರು. ತಹಸೀಲ್ದಾರ್ ಡಿ.ಐ. ಹೆಗ್ಗೊಂಡ ಮನವಿ ಸ್ವೀಕರಿಸಿದರು.  ಶ್ರೀನಿವಾಸ ಅಬ್ಬಿಗೇರಿ, ನಿಂಗಪ್ಪ ಹೆಗ್ಗಪ್ಪನವರ, ದೇವು ಹಡಪದ, ಅಂದಾನಗೌಡ ಕುಲಕರ್ಣಿ, ಆನಂದ ಬನ್ನಿಕೊಪ್ಪ, ರುದ್ರಪ್ಪ ಲದ್ದಿ, ಎಂ.ಪಿ. ಕೊರ್ಲಹಳ್ಳಿ, ಸುಭಾಷ ಗುಡಿಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement