ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಾಹಿತಿ ಕೊರತೆ: ವಿಮೆ ಕಂಪನಿ ಮೇಲೆ ಆಕ್ರೋಶ

Srinivasa Murthy VN
Updated On : 1 Jul 2014, 10:44 am

ನರಗುಂದ: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರೈತ ಸಮುದಾಯ ಸರ್ಕಾರ ಜಾರಿಗೆ ತಂದಿರುವ ಹವಾಮಾನ ಬೆಳೆ ವಿಮೆ ತುಂಬಲು ಹೋದರೆ ಯುನೈಟೆಡ್ ವಿಮೆ ಕಂಪನಿಯವರು ಯೋಜನೆ ಕುರಿತು ಅಧಿಕಾರಿಗಳು, ರೈತರಿಗೆ ಸರಿಯಾದ ಮಾಹಿತಿ ನೀಡದೇ ಇರುವುದಕ್ಕೆ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರೈತರು, ಬಿ.ಟಿ.ಹತ್ತಿ, ಈರುಳ್ಳಿ, ಹೆಸರು, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಈ ಬೆಳೆಗಳಿಗೆ ಹವಾಮಾನ ವಿಮೆ ಸೌಲಭ್ಯ ನೀಡಬೇಕಾಗಿರುವುದು ಕಂಪನಿ ನಿಯಮ. ಆದರೆ, ಅದರ ಬಗ್ಗೆ ಅಲ್ಲಿನ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ವಾಗ್ವಾದ ನಡೆಸಿದರು.   ಅಧಿಕಾರಿ ಪ್ರಭಾಕರ ಭಾವಿ, ಸರಿಯಾದ ಮಾಹಿತಿ ನೀಡದೇ ಇದ್ದಾಗ ರೈತರು ಮತ್ತಷ್ಟು ಆಕ್ರೋಶಗೊಂಡರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ವೈ. ಕೊಡತಗೇರಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಮಲ್ಲಿಕಾರ್ಜುನ ನಂದಿ, ಬಿ.ಆರ್. ನಂದಿ, ವೀರನಗೌಡ ಪಾಟೀಲ, ವೀರಣ್ಣ ಹೂಲಗೇರಿ, ಮಂಜುನಾಥ ಸವದತ್ತಿ, ನಿಂಗಪ್ಪ ತಿರಕ್ಕನವರ, ಎನ್.ಎನ್. ಕೊನನ್ನವರ, ಬಸವರಾಜ ಸಾಬಳೆ, ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement