ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಹಕಾರ ತತ್ವದಡಿ ಕಾರ್ಯನಿರ್ವಹಿಸಿ

Srinivasa Murthy VN
Updated On : 17 Mar 2014, 11:07 am

ಕನ್ನಡಪ್ರಭ ವಾರ್ತೆ, ಗದಗ, ಮಾ. 16
ಸಹಕಾರ ತತ್ವದಡಿಯಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರದ ಸಂಘಗಳು ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧ್ಯ ಎಂದು ಗದಗ ಗ್ರಾಮೀಣ ಬಿಇಒ ಶಂಕರ ಹೂಗಾರ ಹೇಳಿದರು.
ಅವರು ಶನಿವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಹುಲಕೋಟಿ ಹಾಗೂ ಅಡವಿಸೋಮಾಪುರ ಶಿಕ್ಷಕ-ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘಗಳ ನೂತನ ಮತ್ತು ನಿಕಟಪೂರ್ವ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಶೈಕ್ಷಣಿಕ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಪರಸ್ಪರ ಎಲ್ಲರೂ ಒಂದಾಗಿ ಅವಿರೋಧವಾಗಿ ಶಿಕ್ಷಕರ ಪತ್ತಿಗೆ ಆಯ್ಕೆ ಮಾಡಿರುವುದು ಸಂತೋಷಕರ ಸಂಗತಿ ಎಂದರು.
ಗದಗ ಗ್ರಾಮೀಣ ಬಿಆರ್‌ಸಿ ಸಮನ್ವಯ ಅಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಗದಗ ತಾಲೂಕಿನ ಶಿಕ್ಷಕ ಸಮುದಾಯ ಮಾದರಿಯಾಗಿದ್ದು, ಹುಲಕೋಟಿ ಹಾಗೂ ಅಡವಿಸೋಮಾಪುರ ಶಿಕ್ಷಕರ ಪತ್ತಿಗೆ ಅವಿರೋಧ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದರು. ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರವಿ ಗುಂಜೀಕರ ಮಾತನಾಡಿ, ನೌಕರರ ಒಗ್ಗಟ್ಟಾಗಿ ಇರಬೇಕು, ಕೆಲಸಗಳಲ್ಲಿ ಶ್ರದ್ಧೆ ಹೊಂದಿ ಒಟ್ಟಾಗಿ ಕಾರ್ಯ ಕೈಗೊಳ್ಳಬೇಕು ಎಂದರು.
ಬಸವಪ್ರಭು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಧಾರವಾಡ ಮಾತನಾಡಿ, ಸಹಕಾರಿ ರಂಗದಲ್ಲಿ ಸಹಕಾರ ಅಭದ್ರಗೊಂಡರೆ ಸಹಕಾರಿ ಸಂಘಗಳು ದಿವಾಳಿ ಆಗುತ್ತವೆ. ಅದಕ್ಕಾಗಿ ಸಹಕಾರಿ ಸಂಘಗಳನ್ನು ಜವಾಬ್ದಾರಿ ಮತ್ತು ಹೊಣೆಗಾರಿಕೆಯೊಂದಿಗೆ ಮುನ್ನಡೆಸಬೇಕು ಎಂದರು.
ರಾಜ್ಯ ವೀರಶೈವ ಲಿಂಗವಂತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ. ಪಾಟೀಲ ಮಾತನಾಡಿ, ಹತ್ತು ಹಲವು ಸಂಘರ್ಷಗಳ ಮಧ್ಯ ಅವಿರೋಧ ಆಯ್ಕೆ ನಡೆದರೂ ಶಿಕ್ಷಕರು ನಾವೆಲ್ಲರೂ ಒಂದೇ ಎಂದರಲ್ಲದೆ ಯಾರಿಗಾದರೂ ಅನ್ಯಾಯ ಶೋಷಣೆ ಆದಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಡೈಯಟ್ ನಿವೃತ್ತ ಉಪನ್ಯಾಸಕ ಎಸ್.ಟಿ. ಬ್ಯಾಕೋಡ ಮಾತನಾಡಿ, ನಾವು ಸಲ್ಲಿಸುವ ಸೇವಾ ಕಾರ್ಯದಲ್ಲಿ ದಕ್ಷತೆ ಇರಲಿ, ಎಲ್ಲರಲ್ಲೂ ಒಗ್ಗಟ್ಟಿರಲಿ, ಕರ್ತವ್ಯದ ಜತೆಗೆ ದಕ್ಷತೆ ಮೂಡಿ ಬರಲಿ, ನನಗಾಗಿ ಎಲ್ಲರೂ ಎಲ್ಲರಿಗಾಗಿ ನಾನು ಎಂಬ ತತ್ವ ನಿಮ್ಮಲ್ಲಿರಲಿ ಎಂದರು.
ಹುಲಕೋಟಿಯ ಸಹಕಾರಿ ಪತ್ತಿನ ನೂತನ ಅಧ್ಯಕ್ಷ ಬಿ.ಎಸ್. ಹನುಮಂತಗೌಡ್ರ, ಉಪಾಧ್ಯಕ್ಷೆ ಜಿ.ಕೆ. ಅರುಂಧತಿ, ಅಡವಿಸೋಮಾಪುರದ ಸಹಕಾರಿ ಪತ್ತಿನ ನೂತನ ಅಧ್ಯಕ್ಷ ಎಸ್.ಪಿ. ಕೊಪ್ಪದ, ಉಪಾಧ್ಯಕ್ಷ ಎಸ್.ಬಿ. ಅಂಗಡಿ ಹಾಗೂ ನಿರ್ದೇಶಕ ಮಂಡಳಿಯವರನ್ನು ನಿಕಟಪೂರ್ವ ಅಧ್ಯಕ್ಷರು, ನಿರ್ದೇಶಕ ಮಂಡಳಿಯವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಸೋಮಶೇಖರ ಬಡಿಗೇರ ಪ್ರಾರ್ಥಿಸಿದರು. ಎಸ್.ಆರ್. ಬಂಡಿ ಸ್ವಾಗತಿಸಿದರು. ಪಿ.ಬಿ. ಮುಧೋಳಮಠ ನಿರೂಪಿಸಿದರು. ವಿ.ಎಂ. ಹಿರೇಮಠ ವಂದಿಸಿದರು. ಬಿ.ಪಿ. ಹಿರೇಮಠ, ಆರ್.ಜಿ. ಮಾಶಾಳ, ಪಿ.ಎಚ್. ಮಡಿವಾಳ, ಬಿ.ವಿ. ಪಾಟೀಲ, ಜೆ.ಟಿ. ದಂಡಗಿ, ಎಂ.ವಿ. ಕಲಹಾಳ, ಎಸ್.ಎಚ್. ದಂಡಗಿದಾಸರ, ಎಸ್.ಎಸ್. ಹುಬ್ಬಳ್ಳಿ, ಬಿಆರ್‌ಪಿ ಕೆ.ಬಿ. ಕೊಣ್ಣೂರ, ವಿವೇಕಾನಂದಗೌಡ ಪಾಟೀಲ, ಎಸ್.ಎನ್. ಗದ್ದಿ, ಎ.ವಿ. ಪ್ರಭು, ಕೆ.ಎಸ್. ದಿಂಡಿ, ವಿಶ್ವನಾಥ ಕಮ್ಮಾರ, ಜಿ.ಎಸ್. ಗೌಡರ, ಎಸ್.ಎಚ್. ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement