ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬ್ಯಾಡಗಿಯಲ್ಲಿ ಸಂಭ್ರಮದ ಹೋಳಿ ಆಚರಣೆ

Srinivasa Murthy VN
Updated On : 22 Mar 2014, 11:56 am

ಬ್ಯಾಡಗಿ: ರಂಗಪಂಚಮಿ ದಿನವಾದ ಶುಕ್ರವಾರ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಡಗರದಿಂದ ಶಾಂತಿಯುತವಾಗಿ ಆಚರಿಸಲಾಯಿತು.
ಹೊಂಡದ ಓಣಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ರತಿ-ಕಾಮಣ್ಣನನ್ನು ಸಮಿತಿ ಸದಸ್ಯರು ಬೆಳಗ್ಗೆ 9ಕ್ಕೆ ಕಾಮದಹನ ನಡೆಸಿದರು. ಬಳಿಕ ಚಾವಡಿ ರಸ್ತೆ, ನೆಹರು ನಗರ, ಬಸವೇಶ್ವರ ನಗರ ಮುಂತಾದೆಡೆಗಳಲ್ಲಿ ಕಾಮದಹನಕ್ಕೆ ಚಾಲನೆ ನೀಡುವ ಮೂಲಕ ಯುವಕರು ಪರಸ್ಪರ ಬಣ್ಣದೋಕುಳಿ ಎರಚಾಟದಲ್ಲಿ ತೊಡಗಿದರು.
ಹೋಳಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಚಕ್ಕಡಿ ಬಂಡಿಯಲ್ಲಿ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬ್ಯಾರಲ್‌ಗಳಲ್ಲಿ ಬಣ್ಣ ತುಂಬಿಕೊಂಡಿದ್ದ ಯುವಕರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ವಿವಿಧ ವೇಷಭೂಷಣಗಳನ್ನು ತೊಟ್ಟ ಯುವಕರು ಹಲಗೆಗಳ ನಾದಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಬೆಳಗ್ಗೆಯಿಂದಲೇ ಮಕ್ಕಳು ಪಟ್ಟಣದ ಚಾವಡಿ ಓಣಿ, ಮುಖ್ಯರಸ್ತೆ, ನೆಹರು ನಗರ, ಸೋಗಿಯವರ ಓಣಿ, ಹೊಂಡದ ಓಣಿ, ವಾಲ್ಮೀಕಿಸಂಘ ಮುಂತಾದ ಪ್ರದೇಶಗಳಲ್ಲಿ ಕಾಮದಹನ ನಡೆಸಿ ಪಿಚಕಾರಿಗಳಲ್ಲಿ ಬಣ್ಣ ತುಂಬಿ ಜನರಿಗೆ ಎರಚುವ ಮೂಲಕ ಹಬ್ಬದ ಸವಿಯನ್ನು ಆನಂದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಪಟ್ಟಣದ ಯುವಕರು ಚಿತ್ರನಟ ಉಪೇಂದ್ರ, ರಾವಣಾಸುರ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಜೋಗಿ ವೇಷಧಾರಿಗಳು ಹಲಗೆಯ ತಾಳಕ್ಕೆ ಹೆಜ್ಜೆ ಹಾಕುತ್ತಾ ಕುಣಿದ ಕುಪ್ಪಳಿಸಿ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಗಡಿಗೆ ಒಡೆಯುವ ಸ್ಪರ್ಧೆ: ಪಟ್ಟಣದ ಚಾವಡಿ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಸೇರಿ ಗಡಿಗೆ ಒಡೆಯಲು ಪ್ರಯತ್ನಿಸುತ್ತಿದ್ದ ದೃಶ್ಯ ಜನರನ್ನು ಆಕರ್ಷಿಸಿತು. ಪಟ್ಟಣದ ವಿವಿಧ ಸಮಾಜದ ಗಣ್ಯರು ಹಾಗೂ ಚುನಾಯಿತ ಪ್ರತಿನಿಧಿಗಳು ಹೋಳಿಹಬ್ಬದಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾಮದಹನ ಸಮಿತಿಯ ಗಂಗಣ್ಣ ಎಲಿ, ಪುರಸಭೆ ಸದಸ್ಯರಾದ ಮುರಿಗೆಪ್ಪ ಶೆಟ್ಟರ, ಬಸವರಾಜ ಹಂಜಿ, ಬಸವರಾಜ ಛತ್ರದ, ದುರ್ಗೇಶ ಗೋಣೆಮ್ಮನವರ ರೈತ ಸಂಘದ ಶಹರ ಘಟಕದ ಅಧ್ಯಕ್ಷ ಚಿಕ್ಕಪ್ಪ ಛತ್ರದ ಹೋಳಿ ಆಚರಿಸಿದರು.
ಪೊಲೀಸ್ ಬಂದೋಬಸ್ತ್: ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಿತ್ತು. ಸಿಪಿಐ ಹಾಲಮೂರ್ತಿರಾವ್ ನೇತೃತ್ವದಲ್ಲಿ ಪಿಎಸ್‌ಐ ಗಿರೀಶ್ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಹರೆಯನ್ನು ರಚಿಸಲಾಗಿತ್ತು.

ಬಂಕಾಪುರದಲ್ಲಿ ಬಣ್ಣದೋಕುಳಿ
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಯುವಕರು ಬಣ್ಣದೋಕುಳಿ ಆಡಿದರು. ಸ್ತ್ರೀಯರೂ ತಮ್ಮ ಅಕ್ಕ-ಪಕ್ಕದವರ ಮನೆಗೆ ಹೋಗಿ ಸಿಕ್ಕ ಸಿಕ್ಕವರಿಗೆ ಬಣ್ಣ ಬಳಿದು ಪುರುಷರಗಿಂತ ನಾವೇನೂ ಕಮ್ಮಿ ಇಲ್ಲಾ ಎನ್ನುವಂತೆ ಹೋಳಿ ಹಬ್ಬ ಆಚರಿಸಿದರು. ಪಟ್ಟಣದಲ್ಲಿ ವಿವಿಧೆಡೆ ಪ್ರತಿಷ್ಠಾಪಿಸಿರುವ ಕಾಮಣ್ಣ ಸಂಘದವರು ಹಲಗೆ ಭಾರಿಸುತ್ತಾ ವಿವಿಧ ವೇಷ ಹಾಕಿಕೊಂಡು ಜನರನ್ನು ರಂಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement