ವಿಜೃಂಭಣೆಯ ಶ್ರೀ ಲಕ್ಷ್ಮೀ ಕನಕ ನರಸಿಂಹ ಸ್ವಾಮಿ ಮಹಾರಥೋತ್ಸವ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 21
ಮುಂಡರಗಿ ಪಟ್ಟಣದ ಶ್ರೀ ಲಕ್ಷ್ಮೀ ಕನಕ ನರಸಿಂಹ ಸ್ವಾಮಿಯ ಮಹಾರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಜಾತ್ರೆಗೆ ಸುತ್ತ ಮುತ್ತನಲಿನ ಸಾವಿರಾರು ಭಕ್ತರು ಆಗಮಿಸಿದ್ದರು. ನಾಡಗೌಡ್ರ ಮನೆತನದ ಹಿರಿಯರಾದ ವಿ.ಎಲ್.ನಾಡಗೌಡ್ರ ಮಹಾರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷೆ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಅಂದಪ್ಪ ಬೆಲ್ಲದ, ವೈ.ಎನ್. ಗೌಡರ, ನೀಲಕಂಠಪ್ಪ ಪತ್ತಾರ, ಚಂದ್ರಹಾಸ ಉಳ್ಳಾಗಡ್ಡಿ, ಈಶ್ವರಪ್ಪ ಬೆಟಗೇರಿ, ಗೌತಮಚಂದ್ ಚೋಪ್ರಾ, ಎ.ಪಿ. ದಂಡಿನ, ಪಿ.ಜಿ. ಹಿರೇಮಠ, ಆರ್.ವೈ. ಶಿರಸಗಿ, ದಶರಥ ಕುರಿ, ಸೇಖರಾಜ ಹೊಸಮನಿ, ಮಂಜುನಾಥ ಇಟಗಿ, ಬಸವರಾಜ ರಾಮೇನಹಳ್ಳಿ, ದೇವೇಂದ್ರಪ್ಪ ಭಂಡಾರಿ, ಧ್ರುವಕುಮಾರ ಹೊಸಮನಿ, ಅಂದಪ್ಪ ಗೋಡಿ, ಮಂಜುನಾಥ ಮುಧೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.