ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಎಟಿಎಂ ಉದ್ಘಾಟನೆ, ಸಮಾವೇಶ

Srinivasa Murthy VN
Updated On : 25 Mar 2014, 10:59 am

ಮುಂಡರಗಿ: ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ಶಾಖೆಯ ನೂತನ ಎಟಿಎಂ ಉದ್ಘಾಟನೆ ಹಾಗೂ ಗ್ರಾಹಕರ ಸಮಾವೇಶ ಮಾ. 25ರಂದು ಸಂಜೆ 4 ಗಂಟೆಗೆ ಪಟ್ಟಣದ ಬ್ಯಾಂಕ್ ಶಾಖೆಯ ಕಟ್ಟಡದಲ್ಲಿ ಜರುಗಲಿದೆ. ಶಾಖೆಯ ಎಟಿಎಂ ಸೇವೆಯನ್ನು ಎಸ್‌ಬಿಎಂ ಶಾಖೆಯ ಹುಬ್ಬಳ್ಳಿ ಉಪಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಕಾಶಿ ಉದ್ಘಾಟಿಸಲಿದ್ದಾರೆ.
ಜ. ಅನ್ನದಾನ ಶ್ರೀಗಳು ಸಾನ್ನಿಧ್ಯ ವಹಿಸುವರು. ಹುಬ್ಬಳ್ಳಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀಧರ ಕಲ್ಕೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗಂಗಾಪುರ ವಿಜಯನಗರ ಶುಗರ್ಸ್‌ನ ಕೇನ್ ಅಡ್ವೈಜರ್ ಪಿ. ರಾಜಗೋಪಾಲ ಆಗಮಿಸಲಿದ್ದಾರೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮುಂಡರಗಿ ಎಸ್‌ಬಿಎಂ ಶಾಖೆ ವ್ಯವಸ್ಥಾಪಕ ಆರ್.ಕೆ. ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಜಿಡ್ಡಿ ದುರ್ಗಾದೇವಿ ಜಾತ್ರೋತ್ಸವ
ಗಜೇಂದ್ರಗಡ: ಜಿಡ್ಡಿ ದುರ್ಗಾದೇವಿ ಟ್ರಸ್ಟ್‌ನಿಂದ ಸಮೀಪದ ಉಣಚಗೇರಿ ಗ್ರಾಮದ ಅದಿ ದೇವತೆ ಜಿಡ್ಡಿ ದುರ್ಗಾದೇವಿ ಜಾತ್ರಾ ಮಹೋತ್ಸವ ಮಾ. 25ರಂದು ಸಂಜೆ 5ಕ್ಕೆ ಜರುಗಲಿದೆ. ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಶ್ರೀಗಳು, ಚಳಗೇರಿಯ ವಿರೂಪಾಕ್ಷಲಿಂಗ ಶಿವಾಚಾರ್ಯ, ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು, ರಾಜನಳ್ಳಿಯ ಪ್ರಸನ್ನಾನಂದಪುರಿ ಶ್ರೀಗಳು, ಯಲಬುರ್ಗಾದ ಶ್ರೀಧರಮುರಡಿ ಹಿರೇಮಠ, ಬಸವಲಿಂಗೇಶ್ವರ ಶಿವಾಚಾರ್ಯರು, ಕಾಲಕಾಲೇಶ್ವರ ದೇಗುಲ ಅರ್ಚಕ ಕಲ್ಲಿನಾಥ ಭಟ್ ಪೂಜಾರ, ಸಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement