ಮಗನಿಗಾಗಿ ಡಿಸಿ ಕಚೇರಿ ಮೆಟ್ಟಿಲ ಮೇಲೆ ಕುಳಿತು ಕಾದ ದೇಶಪಾಂಡೆ
ಕಾರವಾರ: ಇದು ಖಂಡಿತ ಧರಣಿಯಲ್ಲ. ನಾಮಪತ್ರ ಸಲ್ಲಿಸಲು ತೆರಳಿದ ಮಗ ಬರುವುದನ್ನು ಕಾಯುತ್ತ ಸಚಿವ ಆರ್.ವಿ. ದೇಶಪಾಂಡೆ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಕುಟುಂಬ ಸಹಿತರಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತಿದ್ದು ಅಚ್ಚರಿ ಹುಟ್ಟಿಸಿತು. ಮಾರ್ಗರೆಟ್ ಆಳ್ವ ನನ್ನ ಹಿರಿಯಕ್ಕ ಇದ್ದಂತೆ. ನಿವೇದಿತ ಆಳ್ವ ಕೂಡ ನನ್ನ ಮಗ ಇದ್ದಂತೆ. ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ಮಾಧ್ಯಮದ ಸೃಷ್ಟಿ ಎಂದು ಹೇಳಿದರು.
ಪ್ರಶಾಂತ ದೇಶಪಾಂಡೆ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸಲು ತೆರಳಿದರು. ಆರ್.ವಿ. ದೇಶಪಾಂಡೆಯೂ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಆದರೆ ಐದಕ್ಕಿಂತ ಹೆಚ್ಚು ಜನ ಒಳಗೆ ಹೋಗುವಂತಿಲ್ಲ. ದೇಶಪಾಂಡೆ, ಪತ್ನಿ ರಾಧಾ, ಇನ್ನೊಬ್ಬ ಮಗ ಪ್ರಸಾದ್ ದೇಶಪಾಂಡೆ ಹೊರಗಡೆ ಕುಳಿತರು. ಪ್ರಭಾಕರ ರಾಣೆ, ಕಿತ್ತೂರು ಶಾಸಕ ಡಿ.ಬಿ. ಇನಾಮದಾರ ಪುತ್ರ ಕೂಡ ಇದ್ದರು.
ಬಿಜೆಪಿ, ಜೆಡಿಎಸ್ ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಅಭಿವೃದ್ಧಿಗೆ ಅವರ ಕೊಡುಗೆ ಏನೂ ಇಲ್ಲ. ಸಾಧನೆ ಬಲ ಇಲ್ಲದೆ ಜಾತಿ, ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯ, ಸಾಧನೆ ಬಗ್ಗೆ ಮಾತನಾಡುತ್ತಿದೆ. ಈವರೆಗೆ ಕಾಂಗ್ರೆಸ್ ಐದು ಬಾರಿ ಸೋತಿರಬಹುದು. ಅವುಗಳಿಗೆ ಕಾರಣ ನಾವು ವಿಶ್ಲೇಷಿಸುವುದಿಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಪ್ರಶಾಂತ ದೇಶಪಾಂಡೆ ಗೆಲುವು ನಿಶ್ಚಿತ ಎಂದರು. ಉತ್ತರ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಏನೇನೂ ಇಲ್ಲ. ಪ್ರತಿ ಚುನಾವಣೆಯನ್ನೂ ಗಮನಿಸಿದಾಗ ಆ ಪಕ್ಷ ಪಡೆದ ಮತಗಳ ಸಂಖ್ಯೆ 70 ಸಾವಿರವನ್ನು ದಾಟಿಲ್ಲ. ಈ ಕ್ಷೇತ್ರ ಕಾಂಗ್ರೆಸ್ನ ಗಂಡುಮೆಟ್ಟಿನ ಕ್ಷೇತ್ರ. ಜನ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಕಾರವಾರ: ಇದು ಖಂಡಿತ ಧರಣಿಯಲ್ಲ. ನಾಮಪತ್ರ ಸಲ್ಲಿಸಲು ತೆರಳಿದ ಮಗ ಬರುವುದನ್ನು ಕಾಯುತ್ತ ಸಚಿವ ಆರ್.ವಿ. ದೇಶಪಾಂಡೆ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಕುಟುಂಬ ಸಹಿತರಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತಿದ್ದು ಅಚ್ಚರಿ ಹುಟ್ಟಿಸಿತು. ಮಾರ್ಗರೆಟ್ ಆಳ್ವ ನನ್ನ ಹಿರಿಯಕ್ಕ ಇದ್ದಂತೆ. ನಿವೇದಿತ ಆಳ್ವ ಕೂಡ ನನ್ನ ಮಗ ಇದ್ದಂತೆ. ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ಮಾಧ್ಯಮದ ಸೃಷ್ಟಿ ಎಂದು ಹೇಳಿದರು. ಪ್ರಶಾಂತ ದೇಶಪಾಂಡೆ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸಲು ತೆರಳಿದರು. ಆರ್.ವಿ. ದೇಶಪಾಂಡೆಯೂ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಆದರೆ ಐದಕ್ಕಿಂತ ಹೆಚ್ಚು ಜನ ಒಳಗೆ ಹೋಗುವಂತಿಲ್ಲ. ದೇಶಪಾಂಡೆ, ಪತ್ನಿ ರಾಧಾ, ಇನ್ನೊಬ್ಬ ಮಗ ಪ್ರಸಾದ್ ದೇಶಪಾಂಡೆ ಹೊರಗಡೆ ಕುಳಿತರು. ಪ್ರಭಾಕರ ರಾಣೆ, ಕಿತ್ತೂರು ಶಾಸಕ ಡಿ.ಬಿ. ಇನಾಮದಾರ ಪುತ್ರ ಕೂಡ ಇದ್ದರು.