ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತಯಂತ್ರ ತರಬೇತಿ ಕಾರ್ಯಾಗಾರ

Srinivasa Murthy VN
Updated On : 27 Mar 2014, 10:54 am

ರೋಣ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೋಣ ವಿಧಾನಸಭೆ ಮತಕ್ಷೇತ್ರದ ವ್ಯಾಪ್ತಿಗೆ ನೇಮಕಗೊಂಡ ಕ್ಷೇತ್ರಾಧಿಕಾರಿಗಳಿಗೆ (ಸೆಕ್ಟರ್ ಆಫೀಸರ್) 2006 ಇ.ವಿ.ಎಂ ಮತಯಂತ್ರದ ಬಳಕೆ ಮತ್ತು ವೈಶಿಷ್ಟತೆ ಕುರಿತು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ ತರಬೇತಿ ಕಾರ್ಯಾಗಾರ ಜರುಗಿತು.
ಅಧಿಕಾರಿ ಎಸ್.ಟಿ. ಬೈರಪ್ಪನವರ ಮಾತನಾಡಿ, ಈ ಬಾರಿ ಮತಯಂತ್ರವನ್ನು ವಿನೂತನ ರೀತಿ ತಯಾರಿಸಲಾಗಿದ್ದು, 2006 ಇವಿಎಂ ಹೆಸರಿನ ಮತಯಂತ್ರ ಇದಾಗಿದೆ. ಇದರಲ್ಲಿ ಈ ಬಾರಿ ಃಕಖಿಆ ಎಂಬ ಅಂಶವನ್ನು ಯಂತ್ರದಲ್ಲಿ ಅಳವಡಿಸಲಾಗಿದೆ. ಈ ನೋಟಾ ಎಂಬ ಬಟನ್ ಅಭ್ಯರ್ಥಿಗಳ ಹೆಸರಿನ ಕೆಳಗಡೆ ಇರುತ್ತದೆ. ಉದಾರಹಣೆಗಾಗಿ ಒಟ್ಟು 6 ಜನ ಅಭ್ಯರ್ಥಿಗಳಲ್ಲಿ 7ನೇ ಬಟನ್ ನೋಟಾ (ಮೇಲಿನವರು ಯಾರು ಬೇಡ) ಬಟನ್ ಆಗಿರುತ್ತದೆ ಎಂಬುದನ್ನು ತಿಳಿಯಬೇಕು. ರೋಣ ಮತಕ್ಷೇತ್ರದಲ್ಲಿ ಒಟ್ಟು 258 ಮತಗಟ್ಟೆಗಳಿದ್ದು, ಅದಕ್ಕಾಗಿ ಒಟ್ಟು 280 ಮತ ಯಂತ್ರಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಯಾವುದೇ ಸಂದರ್ಭ ಮತಯಂತ್ರಗಳು ಕೆಟ್ಟು ನಿಂತಲ್ಲಿ ಪರ್ಯಾಯವಾಗಿ ಶೆ.10ರಷ್ಟು ಮತಯಂತ್ರಗಳನ್ನು ಹೆಚ್ಚುವರಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದ ಅವರು, ಮತ ಯಂತ್ರದಲ್ಲಿನ ಟ್ಟಿಡಿಛ (ಮೇಲಿನವರು ಯಾರು ಬೇಡ) ಎಂಬ ಬಟನ್ ಕುರಿತು ಮತ್ತು ಇವಿಎಂ ಮತ ಯಂತ್ರದ ಪ್ರತಿಯೊಂದು ಭಾಗಗಳ ಕುರಿತು ವಿವರಣೆ ಮತ್ತು ಅದರ ಸಮರ್ಪಕ ಬಳಕೆ ವಿಧಾನ ಕುರಿತು ವಿವರಿಸಿದರು.
ರೋಣ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಷಡಕ್ಷರಪ್ಪ, ತಹಸೀಲ್ದಾರ್ ಎ.ಜಿ. ಪಂಡಿತ, ಉಪ ತಹಸೀಲ್ದಾರ್ ಎನ್.ಎಸ್. ಕೂಡಲ, ಪಿಡಬ್ಲ್ಯೂಡಿ ಎಇಇ ಎಂ.ಬಿ. ದಾನರಡ್ಡಿ, ಜಿಪಂ ಎಇಇ ಕೆ.ಎಲ್. ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಎಲ್.ಎ. ಮೇಸ್ತಾ, ಸಿಡಿಪಿಓ ಬಿ.ಎಸ್. ಮೋಕಾಶಿ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement