ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಏ. 4ರಿಂದ ರಾಮನವಮಿ ಉತ್ಸವ

Srinivasa Murthy VN
Updated On : 28 Mar 2014, 11:12 am

ಗದಗ: ಬೆಟಗೇರಿ ಟರ್ನಲ್‌ಪೇಟೆ ಶ್ರೀರಾಮ ಮಂದಿರದಲ್ಲಿ ಏ.4ರಿಂದ 8ರ ವರೆಗೆ ರಾಮನವಮಿ ಉತ್ಸವವನ್ನು ಸಡಗರ, ಸಂಭ್ರಮದಿಂದ ನೆರವೇರಿಸಲಾಗುವುದು ಎಂದು ಶ್ರೀರಾಮ ದೇವಸ್ಥಾನ ಟ್ರಸ್ಟ್ ಕಮಿಟಿಯ ಯಲ್ಲಪ್ಪ ಕಾಂಬಳೇಕರ ಹಾಗೂ ಉತ್ಸವ ಕಮಿಟಿ ಅಧ್ಯಕ್ಷ ಶರಣಪ್ಪ ಚುರ್ಚಪ್ಪನವರ ತಿಳಿಸಿದ್ದಾರೆ. ರಾಮನವಮಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಏ. 4ರಂದು ಶುಕ್ರವಾರ ಬೆಳಗ್ಗೆ 6.30ಕ್ಕೆ ಶ್ರೀರಾಮ ದೇವರಿಗೆ ರುದ್ರಾಭಿಷೇಕ ನಂತರ ಸಹಸ್ರ ಬಿಲ್ವಾರ್ಚನೆ ಹಾಗೂ ಮಂಗಳಾರತಿ ಅರ್ಚಕ ಮಾಧವರಾವ ಕುಲಕರ್ಣಿ ಅವರಿಂದ ಜರುಗುವುದು. ಸಂಜೆ 7 ಗಂಟೆಗೆ ಪಾಂಡುರಂಗ ವಿಠ್ಠಲ ನಂತರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ಏ. 5ರಂದು ಶನಿವಾರ ಸಂಜೆ 4ಕ್ಕೆ ಮಹಿಳೆಯರಿಂದ ರೋಡ್ ರಂಗೋಲಿ ಸ್ಪರ್ಧೆ ಸಂಘಟಕ ಸರೋಜಾ ಹಣಗಿ, ಲಕ್ಷ್ಮಿ ನಾವಳ್ಳಿ, ಸುವರ್ಣಾ ನಾವಳ್ಳಿ, ಲಕ್ಷ್ಮಿಬಾಯಿ ಬಾಕಳೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಏ. 6ರಂದು ಸಂಜೆ 4ಕ್ಕೆ ಯುವಕರಿಗಾಗಿ ಸ್ಲೋ ಸೈಕಲ್ ಓಡಿಸುವ ಸ್ಪರ್ಧೆ, ಸಂಜೆ 7ಕ್ಕೆ ನಾಗಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಏ. 7ರಂದು ಸಂಜೆ 5ಕ್ಕೆ ಯುವಕರಿಗಾಗಿ ಗಡಗಿ ಒಡೆಯುವ ಕಾರ್ಯಕ್ರಮ ಮತ್ತು ಮಹಿಳೆಯರಿಗಾಗಿ ಬಲೂರ ಒಡೆಯುವ ಸ್ಪರ್ಧೆ, ನಂತರ ನೀರಲ್ಲಿ ಚಂಡನ್ನು ಬಾಯಿಯಿಂದ ತೆಗೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.ಏ. 8ರಂದು ಮಂಗಳವಾರ ಬೆಳಗ್ಗೆ 8ಕ್ಕೆ 101 ಕುಂಭಗಳ ಮೆರವಣಿಗೆ ಶ್ರೀರಾಮ ಮಂದಿರದಿಂದ ಆರಂಭಗೊಂಡು ನರಸಾಪುರ ನಾಕಾ ಬಳಿಯ ಮಾರ್ಕಂಡೇಶ್ವರ ದೇವಸ್ಥಾನ ತಲುಪುವುದು. ಅಲ್ಲಿಂದ ಶ್ರೀ ರಾಮನ ಬೆಳ್ಳಿಯ ತೊಟ್ಟಿಲ ಮೆರವಣಿಗೆ ಕುಂಭ ಹೊತ್ತ ಮಹಿಳೆಯರೂ ಸೇರಿದಂತೆ ನೂರಾನು ಜನ ಭಕ್ತರೊಂದಿಗೆ ಸಡಗರ, ಸಂಭ್ರಮದೊಂದಿಗೆ ಜರುಗಲಿದೆ. ಬೆಳ್ಳಿ ತೊಟ್ಟಿಲ ಮೆರವಣಿಗೆಯು ಟೆಂಗಿನಕಾಯಿ ಬಜಾರ್, ಪಿ.ಬಿ. ರೋಡ್, ಹೊಸಪೇಟ ಚೆಕ್ ಮೂಲಕ ಶ್ರೀರಾಮ ಮಂದಿರ ತಲುಪುವುದು.  ಮಧ್ಯಾಹ್ನ 12ಕ್ಕೆ ಮಹಿಳೆಯರಿಂದ ಶ್ರೀರಾಮನನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ನಡೆಯಲಿದೆ. ನಂತರ 1ಕ್ಕೆ ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದು ಶ್ರೀರಾಮ ದೇವಸ್ಥಾನ ಟ್ರಸ್ಟ್ ಕಮಿಟಿಯ ಹನುಮಂತಪ್ಪ ಗರಗ, ಚನ್ನಪ್ಪ ಗಡ್ಡಿ, ಶರಣಯ್ಯ ಶಿಪ್ಪಯ್ಯನಮಠ, ಉತ್ಸವ ಕಮಿಟಿ ಉಪಾಧ್ಯಕ್ಷ ವಿಶ್ವನಾಥ ಬಸವಾ, ಕಾರ್ಯದರ್ಶಿ ಶ್ರೀಕಾಂತ ದೇಸಾಯಿ, ಖಜಾಂಚಿ ಶ್ರೀರಾಮ ಬಾಕಳೆ ಮೋಹನಸಾ ಬಸವಾ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement