ಗುಲ್ಬರ್ಗಾ

ಸಂಘಕ್ಕೆ ನೇಮಕ

ಗುಲ್ಬರ್ಗ: ನಗರದ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ನಟರಾಜ ಎ. ಕಿರಣಗಿರಕರ್ ಅವರ ಆದೇಶದ ಮೇರೆಗೆ ಅರುಣಕುಮಾರ ಎ. ಹುಲಸೂರರವರಿಗೆ ಸಂಘದ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇವರಿಗೆ ವಹಿಸಿರುವ ಗುರುತ್ತರವಾದ ಹುದ್ದೆಯನ್ನು ಪ್ರಾಮಾಣಿಕತೆಯಿಂದ ನಡೆಸಿಕೊಂಡು ಹೋಗಲು ಸೂಚಿಸಿದೆ ಎಂದು ಯಡಿಯೂರಪ್ಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಶರಣು ಹಾವನೂರು ತಿಳಿಸಿದ್ದಾರೆ.
ಉತ್ಸವಕ್ಕೆ ಕಾಯ್ಕಿಣಿ
ಗುಲ್ಬರ್ಗ: ಇಲ್ಲಿನ ಶತಮಾನ ಕಂಡಿರುವ ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಸಾಂಸ್ಕೃತಿಕ ಉತ್ಸವಕ್ಕೆ ಸಾಹಿತಿ ಜಯಂತ ಕಾಯ್ಕಿಣಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಫೆ.8 ರಂದು ಈ ಉತ್ಸವ ನಡೆಯಲಿದ್ದು ಆ ದಿನ ಕಾಯ್ಕಿಣಿ ಉದ್ಘಾಟಿಸಲಿದ್ದಾರೆ. ಫೆ.8 ಮತ್ತು 9ರ 2 ದಿನಗಳ ಕಾಲ ಉತ್ಸವ ನಡೆಯಲಿದೆ. ಹೈದ್ರಾಬಾದ್ ರಾಮೋಡಿ ಫಿಲಂ ಅಕಾಡಮಿಯ ಪವನಕುಮಾರ ಮಾನ್ವೀಕರ್ ಅವರೂ ಆಗಮಿಸುತ್ತಿದ್ದಾರೆ. ಫೆ.9 ರ ಸಂಜೆಯ 7ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಭಾಗವಹಿಸುತ್ತಿದ್ದಾರೆ.
ಸನ್ಮಾನಕ್ಕೆ ಆಯ್ಕೆ
ಗುಲ್ಬರ್ಗ: ಬಿಜಾಪುರದಲ್ಲಿ ಫೆ.9ರಿಂದ 11ರವರೆಗೆ ನಡೆಯುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸತ್ಯಕಾಮ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕ ಪಿ.ಎಂ. ಮಣ್ಣೂರ ಅವರನ್ನು ಫೆ.11ರಂದು ಸನ್ಮಾನಿಸಲಾಗುತ್ತಿದೆ.ಕಳೆದ 43 ವರ್ಷಗಳಿಂದ ಪತ್ರಿಕಾ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಣ್ಣೂ ಅವರು 1995ರಿಂದ 1998ರವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಾರಾಯಿ ನಿಷೇಧಿಸಿ
ಗುಲ್ಬರ್ಗ: ನಗರದ ಪ್ರಮುಖ ಬೀದಿಗಳಲ್ಲಿ ಸೇರಿದಂತೆ ಹೊಟೇಲ್, ಪಾನ್ ಶಾಪ್‌ಗಳಲ್ಲಿ ರಾಜಾರೋಷವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ದೂರಿದ್ದಾರೆ. ಜಿಲ್ಲೆಯ ಪ್ರಮುಖ ನಗರಗಳಲ್ಲಿ, ತಾಲೂಕುಗಳಲ್ಲಿ ಹಾಗೂ ಗ್ರಾಮಗಳಲ್ಲಿ ಕಿರಾಣಿ ಅಂಗಡಿ, ಪಾನ್ ಶಾಪ್, ಹೊಟೇಲ್‌ನಲ್ಲಿ ಅಲ್ಲದೆ ರಸ್ತೆ ಮೇಲೆ ಮದ್ಯಪಾನ ಮಾರಾಟ ಮಾಡುತ್ತಿದ್ದಾರೆ.  ಅಧಿಕಾರಿಗಳ ವಿರುದ್ಧ ಪೊಲೀಸರು   ಕ್ರಮ ಕೈಗೊಳ್ಳದಿದ್ದರೆ ವಾರದ ನಂತರ ಜೈ ಕರವೇಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ