ಗುಲ್ಬರ್ಗಾ

ಫುಡ್‌ಪಾರ್ಕ್ ಶುರು ಯಾವಾಗ?

ಗುಲ್ಬರ್ಗ/ಜೆವರ್ಗಿ: ಜೇವರ್ಗಿ ಫುಡ್‌ಪಾರ್ಕ್ ಯೋಜನೆ ಪ್ರಗತಿ ಎಲ್ಲಿಗೆ ಬಂತು?
ಕಳೆದ 8 ವರ್ಷಗಳಿಂದ ಈ ಪ್ರಶ್ನೆಗೆ ಜೇವರ್ಗಿ ಜನತೆ, ಯೋಜನೆಗೆ ಭೂಮಿ ಕೊಟ್ಟಿರುವ ರೈತರು ಉತ್ತರ ಹುಡುಕುತ್ತಿದ್ದಾರೆ.
ಕಳೆದ ಎಂಟು ವರ್ಷಗಳ ಹಿಂದೆ ಪಟ್ಟಣದ ಹೊರವಲದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಸರ್ಕಾರ ರೈತರನ್ನು ಅನಾಥರನ್ನಾಗಿಸಿದೆ. ರೈತರಿಗೆ ಕೂಡಲೇ ಉದ್ಯೋಗ ಕೊಡಿ ಇಲ್ಲವೆ ನಮ್ಮ ಭೂಮಿ ಮರಳಿಸಿ ಎಂದು ರೈತರು ಒತ್ತಾಯಿಸಲಾರಂಭಿಸಿದ್ದಾರೆ.
ಸುಳ್ಳು ಭರವಸೆ: 100 ಕೋಟಿ ಅಂದಾಜು ವೆಚ್ಚದ ಆಹಾರ ಪಾರ್ಕ್ ಕಾಮಗಾರಿಗಾಗಿ 105 ಎಕರೆ ಭೂ ಸ್ವಾಧೀನ ಮಾಡಿಕೊಂಡಿದ್ದು. ಭೂ ಸ್ವಾಧೀನಕ್ಕೂ ಮುನ್ನ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ಅಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಜೇವರ್ಗಿಯ ಧರಂಸಿಂಗ್ ರೈತರಿಗೆ ಭರವಸೆ ನೀಡಿದ್ದರು. ಆದರೆ, ಭೂಮಿ ಸ್ವಾಧೀನ ಪಡಿಸಿಕೊಂಡು 8 ವರ್ಷ ಗತಿಸಿದರೂ ಯಾವೊಬ್ಬ ರೈತನ ಮಕ್ಕಳಿಗಾಗಲೀ, ನಿರುದ್ಯೋಗಿ ಯುವಕರಿಗಾಗಲಿ ಉದ್ಯೋಗ ಕೊಡಿಸುವ ಭರವಸೆ ನೂಚ್ಚುನೂರಾಗಿದೆ. 100 ಕೋಟಿಯ ಯೋಜನೆಗೆ ಈ ಕಾಮಗಾರಿಗೆ ಆರಂಭದ ಹಂತದಲ್ಲಿ ಬಿಡುಗಡೆಯಾಗಿದ್ದು ಕೇವಲ 18 ಕೋಟಿ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದ್ದು, ಯೋಜನೆ ಕುಂಟುತ್ತ ಸಾಗಿದೆ.
ಹಿಂದುಳಿದ ಜೇವರ್ಗಿ ಕ್ಷೇತ್ರಕ್ಕೆ ಈ ಯೋಜನೆಯಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಜೊತೆಗೆ ಈ ಭಾಗದಲ್ಲಿ ಕೈಗಾರಿಕೆ ಉದ್ಯಮದಲ್ಲಿಯೂ ಕೊಂಚ ಸುಧಾರಣೆಯಾಗಿ ಈ ದೃಷ್ಟಿಯಲ್ಲಾದರೂ ಅಭಿವೃದ್ಧಿ ಹೊಂದ ಬಹುದು ಎಂಬ ನಿರೀಕ್ಷೆ ಹುಸಿಯಾಗಿ ಈ ಯೋಜನೆ ಕಾರ್ಯರೂಪಕ್ಕೆ ಬಾರದಂತಾಗಿದೆ.
ಸರ್ಕಾರದ್ದು ಮೌನ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೂ ಈ ಯೋಜನೆ ಬಗ್ಗೆ ಚಕಾರವೆತ್ತುತ್ತಿಲ್ಲ. ಭಾರಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರು ಐಟಿ-ಬಿಟಿಗಳಿಗೆ ತೋರಿಸುತ್ತಿರುವ ಉತ್ಸಾಹವನ್ನು ಹಿಂದುಳಿದ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಆಹಾರ ಸಂಸ್ಕರಣ ಘಟಕ ಸ್ಥಾಪನೆಗಾಗಿ ಯಾಕೆ ತೋರುತ್ತಿಲ್ಲ, ರಾಜ್ಯ ಸರ್ಕಾರ ಈ ಯೋಜನೆಗೆ ಕಾಯಕಲ್ಪ ದೊರಕಿಸಿ ಕೊಡುವಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಂಪುರ್ಣ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜೇವರ್ಗಿ ಕ್ಷೇತ್ರದ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಮಲ್ಲಾಬಾದ್ ಏತ ನೀರಾವರಿಗಾಗಿ ತೋರಿಸಿದ ಉತ್ಸಾಹವನ್ನು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗಾಗಿ ಯಾಕೆ ತೋರಿಸುತ್ತಿಲ್ಲ ಎಂಬುದು ಜನರನ್ನು ಪ್ರಶ್ನೆ ರೂಪದಲ್ಲಿ ಕಾಡಲಾರಂಭಿಸಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಅವಕಾಶ ಜೊತೆಗೆ ಈ ಭಾಗದಲ್ಲಿ ಬೆಳೆದ ಬೆಳೆಗಳ ಸಂರಕ್ಷಣೆಗಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಹೆಚ್ಚಿನ ಕಾಳಜಿ ತೋರಲೇಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ