ಜೇವರ್ಗಿ: ಪಟ್ಟಣದ ಅಲ್ಪಸಂಖ್ಯಾತ ಬಂಧುಗಳು ಹಜರತ್ ಮಹಮ್ಮದ್ ಮುಸ್ತಪಾ ಅಲಲಾವೋ ಅಲೆಯೋ ಸಲಂ ಅವರ ಜನ್ಮ ದಿನದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯನ್ನು ಶುಕ್ರವಾರ ನಡೆಸಲಾಯಿತು.
ಖಾಜಾ ಕಾಲೋನಿಯಲ್ಲಿರುವ ಮದಿನಾ ಮಸೀದಿಯಿಂದ ಮಧ್ಯಾಹ್ನ 2ಕ್ಕೆ ನಮಾಜಿನ ನಂತರ ಪ್ರಾರಂಭವಾದ ಮೆರವಣಿಗೆ ಅಖಂಡೇಶ್ವರ ವೃತ್ತದ ಮೂಲಕ ರಿಲ್ಯಾನ್ಸ ಪೆಟ್ರೋಲ್ ಪಂಪ, ಡಾ. ಅಂಬೇಡ್ಕರ್, ಬಸವೇಶ್ವರ ವೃತ್ತ ಹಾಗೂ ವಿವಿಧ ಬೀದಿಗಳಲ್ಲಿ ಮೂಲಕ ಸಂಚರಿಸಿ ಮತ್ತೆ ಮದಿನಾ ಮಸೀದಿಗೆ ತಲುಪಿತು. ಮದಿನಾ ಮತ್ತು ಮೆಕ್ಕಾ ಮಸೀದಿಯ ಕೃತಕ ಗುಂಬಜಗಳು ನೋಡುಗರನ್ನು ಆಕರ್ಷಿಸುವಂತಿತ್ತು. ಮದಿನಾ, ಮೆಕ್ಕಾ, ಜಾಮಿಯಾ ಮಸೀದಿ ಹಾಗೂ ಮದರಸಾ ಧಾರ್ಮಿಕ ಗುರುಗಳು ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಮಹಿಬೂಬ್ ಸಾಬ್ ಕೆಂಬಾವಿ, ಏಜಾಜ್ ನಮಾಜಿ, ಬಾಬಾ ದರ್ಪಣ, ಯೂಸೂಫ್ ಭಾಗವಾನ್, ಕಾಸಿಂ ಸಾಬ್ ಕೂಡಿ, ಮಕದುಮ್ ಪಾಲ್ಗೊಂಡಿದ್ದರು.