ಗುಲ್ಬರ್ಗಾ

ಪತ್ರಕರ್ತರು ಸಮಾಜಮುಖಿಯಾಗಲಿ

ಗುಲ್ಬರ್ಗ: ನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಮಾಸ ಪತ್ರಿಕೆಯ ಅಡಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪುರಸ್ಕಾರಗಳನ್ನು ಪಡೆದ ಪತ್ರಕರ್ತರಿಗೆ ಸತ್ಕಾರ ನಡೆಯಿತು.
ಸಂಘದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಈ ಕಾಯಕ್ರಮದ ಉಸ್ತುವಾರಿ ಹೊತ್ತಿದ್ದರು. ಸಮಾರಂಭದಲ್ಲಿ ಮಾತನಾಡಿದ ಎಂಎಲ್ಸಿ ಅಮರನಾಥ ಪಾಟೀಲ್, ಪತ್ರಕರ್ತರು, ಹೋರಾಟಗಾರರು ಹಾಗೂ ಜನನಾಯಕರು ಸಮಾಜಮುಖಿಯಾದಲ್ಲಿ ಅಂತಹ ಪರಿಸರದಲ್ಲಿ ಬದಲಾವಣೆ ಗಾಳಿ ಬೀಸುತ್ತದೆ ಎಂದರು.
ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ಪತ್ರಕರ್ತರೊಬ್ಬರು 100 ಮಂದಿ ಜೊತೆ ಸ್ನೇಹ ಗಳಿಸಿದರೆ ಸಾವಿರ ಜನರೊಂದಿಗೆ ದ್ವೇಷ ಕಟ್ಟಿಕೊಂಡಿರುತ್ತಾರೆ. ಆದಾಗ್ಯೂ ಪತ್ರಕರ್ತರಾದವರ ಶ್ರಮ ಗುರುತಿಸಿ ಮಾಡುತ್ತಿರುವ ಸತ್ಕಾರ ಶ್ಲಾಘನೀಯ ಎಂದರು. ಸರಡಗಿಯ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ನಾಗಲಿಂಗಯ್ಯ ಮಠಪತಿ ವಂದಿಸಿದರು. ವಿಶ್ವಗಂಗಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಂಕರ ಬಿರಾದಾರ, ಕಸಾಪ ಕಾರ್ಯದರ್ಶಿಗಳಾದ ಬಿ.ಎಚ್. ನೀರ್ಗುಡಿ, ಸುರೇಶ ಬಡಿಗೇರ್, ಕರವೇ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರದ ಭರವಸೆ: ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದ ಸರ್ಕಾರಿ ವೈದ್ಯರು!

ಕಲ್ಯಾಣ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣ: ರಾಜ್ಯ ಸರ್ಕಾರ ಪ್ರಸ್ತಾಪ

News wrap 10-03-2026| Israel Iran conflict: ಎಲ್ ಪಿಜಿ ಪೂರೈಕೆ ಕೊರತೆ, ಒತ್ತಡದಲ್ಲಿ ಹೊಟೆಲ್ ಉದ್ಯಮ, ಬ್ಯಾಡಗಿ ಮೆಣಸಿನಕಾಯಿ ವರ್ತಕರಿಗೆ ಸಂಕಷ್ಟ; ಮುಷ್ಕರ: ಮಾರ್ಚ್ 11ರಿಂದ ಆರೋಗ್ಯ ಸೇವೆಗಳು ಸ್ಥಗಿತ: ಸಮಸ್ಯೆ ಬಗೆಹರಿಸಲಿದ್ದೇವೆ- ದಿನೇಶ್ ಗುಂಡೂರಾವ್

ಹನಿಟ್ರ್ಯಾಪ್‌: ಬೆಳಗಾವಿಯಲ್ಲಿ ಶ್ರೀಮಂತ ಪುರುಷರನ್ನು ಖೆಡ್ಡಾಗೆ ಬೀಳಿಸುತ್ತಿದ್ದ ಫ್ಯಾಷನ್‌ ಡಿಸೈನರ್‌ ಬಂಧನ!

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ: ಸಿಐಡಿ ತನಿಖೆಗೆ ಗೃಹ ಸಚಿವ ಪರಮೇಶ್ವರ ಆದೇಶ

SCROLL FOR NEXT