ಹಾಸನ: ಹಾಸನ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದಿಂದ ಶ್ರೀಕ್ಷೇತ್ರ ಹರಿಹರಪುರದ ತುಂಗಾನದಿಯಲ್ಲಿ ಮಾಘಸ್ನಾನ ಏರ್ಪಡಿಸಲಾಗಿತ್ತು. ರಮೇಶ್ಶರ್ಮಾ ಮತ್ತು ಜಕ್ಕನಹಳ್ಳಿ ವೆಂಕಟೇಶ್ ಜೋಯಿಸರ ನೇತೃತ್ವದಲ್ಲಿ 110 ಜನ ಮಾಘಸ್ನಾನದಲ್ಲಿ ಪಾಲ್ಗೊಂಡರು. ಸಂಕಲ್ಪ ಪೂರ್ವಕ ಮಾಘಸ್ನಾನ, ಸುಹಾಸಿನಿಯರಿಂದ ಗಂಗಾಪೂಜೆ, ನಂತರ ಮಾಧವೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಸಾಯಿತು. ಹರಿಹರಪುರದಲ್ಲಿ ಭೋಜನ ಮುಗಿಸಿಕೊಂಡು ಶ್ರೀ ಬದರಿ ಶಂಕಾರಾಚರ್ಯ ಪೀಠವಾದ ಶ್ರೀಕಾಷೇತ್ರ ಶಕಟಪುರಕ್ಕೆ ಬಂದು ಕ್ಷೇತ್ರ ದೇವತೆಗಳಾದ ಶ್ರೀ ಸಂತಾನ ಗೋಪಾಲಕೃಷ, ಲಕ್ಷ್ಮೀನರಸಿಂಹ ಹಾಗೂ ಶ್ರೀ ರಾಜ ರಾಜೇಶ್ವರಿ ದೇವರ ದರ್ಶನ ಮಾಡಿ ಅನಂತ ಶ್ರೀ ಕೃಷಾನಂದ ಯತಿವರ್ಯರ ದರ್ಶನ ಪಡೆದು ಫಲಮಂತ್ರಾಕ್ಷತೆ ಸ್ವೀಕರಿಸಿದರು. ಕಾರ್ಯಕ್ರಮ ಏರ್ಪಡಿಸಿದ್ದ ಹೊಯ್ಸಳ ಕರ್ನಾಟಕ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಶ್ರಮ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಯಿತು ಎಂದು ಪ್ರಭಾರಿ ಅಧ್ಯಕ್ಷ ಎಂ.ಕೆ.ಶಿವರಾಮು ತಿಳಿಸಿದ್ದಾರೆ.