ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೆಜೆಪಿ ಬೆಂಬಲಿಸಿ
ಹಾನಗಲ್ಲ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ನೀಡಿದ ವಿಶೇಷ ಅನುದಾನಗಳು ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಯೋಜನೆಗಳಿಂದ ಆಕರ್ಷಿತರಾಗಿರುವ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಜನತಾ ಪಕ್ಷ ಬೆಂಬಲಿಸುತ್ತಿದ್ದಾರೆ ಎಂದು ಹಾನಗಲ್ಲ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಸಿ.ಎಂ. ಉದಾಸಿ ತಿಳಿಸಿದರು.
ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಕೆಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಯಡಿಯೂರಪ್ಪನವರು ಬಿಜೆಪಿಯಲ್ಲಿದ್ದ ಸಂದರ್ಭದಲ್ಲೂ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಸಮುದಾಯದ ರಕ್ಷಣೆಗಾಗಿ ಗಮನಹರಿಸಿದ್ದಾರೆ. ಬಿಎಸ್ವೈ ಆಡಳಿತಾವಧಿಯಲ್ಲಿ ಒಂದೂ ಕೋಮು ಗಲಭೆಗಳು ನಡೆಯದಿರುವುದು ಗಮನಾರ್ಹ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ತಿಳವಳ್ಳಿ ಗ್ರಾಮ ಮುಸ್ಲಿಂ ಸಮುದಾಯದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಅಬ್ದುಲ್ ರಹಮಾನಸಾಬ ಸವಣೂರು ನೇತೃತ್ವದಲ್ಲಿ ಗ್ರಾಪಂ ಸದಸ್ಯರಾದ ಮಹಮೂದಮಿಯ್ಯಾ ಅಜೀಜ್ ಮಿಯ್ಯಾನವರ, ನಾಶೀರಖಾನ ಲಾಲಖಾನನವರ, ನೂರಹ್ಮದ್ ಅಜೀಜ್ ಮಿಯ್ಯಾನವರ, ಮಖಬುಲ್ಅಹ್ಮದ್ ಮುಲ್ಲಾ, ಮಹಬೂಬಜಾನ ಜಂಬೂರ, ಗುಲಾಂಸಾಬ ಮೂಡಿ, ಮಹ್ಮದಜಾಫರ್ ಜಂಬೂರ ಇತರರು ಕೆಜೆಪಿ ಸೇರಿದರು.
ಸತ್ತಾರಸಾಬ ಅರಳೇಶ್ವರ, ಬಿ.ಎಸ್. ಅಕ್ಕಿವಳ್ಳಿ, ಎ.ಎಸ್. ಬಳ್ಳಾರಿ, ಮಹಬೂಬಲಿ ಬ್ಯಾಡಗಿ, ರಮೇಶ ಉಪ್ಪಾರ, ಸಾದಿಕಹ್ಮದ್ ಸವಣೂರ, ಪರಮೇಶಪ್ಪ ಎಲಿ, ಶಿವಲಿಂಗಪ್ಪ ತಲ್ಲೂರ, ಕುಬೇರಪ್ಪ ಈಳಿಗೇರ, ಅಬ್ದುಲ್ಖಾದರ ಮುಗೂರ, ಹನುಮಂತಪ್ಪ ಶಿರಾಳಕೊಪ್ಪ, ಶಿವಯೋಗಿ ಒಡೆಯರ, ಹನುಮಂತಪ್ಪ ಗುಡ್ಡದಮತ್ತಳ್ಳಿ ಉಪಸ್ಥಿತರಿದ್ದರು.